Download Our App

Follow us

Home » ಸಿನಿಮಾ » ವಿನಯ್​​ರಾಜ್​​ ಕುಮಾರ್​​ ನಟನೆಯ ‘ಪೆಪೆ’ ಶೋ ರೀಲ್ ನೋಡಿ ಕಿಚ್ಚ ಸುದೀಪ್ ಫಿದಾ..!

ವಿನಯ್​​ರಾಜ್​​ ಕುಮಾರ್​​ ನಟನೆಯ ‘ಪೆಪೆ’ ಶೋ ರೀಲ್ ನೋಡಿ ಕಿಚ್ಚ ಸುದೀಪ್ ಫಿದಾ..!

ಒಂದು ಸರಳ ಪ್ರೇಮಕಥೆ’ ಚಿತ್ರದ ಬಳಿಕ ದೊಡ್ಮನೆ ಕುಡಿ ವಿನಯ್​​ರಾಜ್​​ ಕುಮಾರ್​​ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ ‘ಪೆಪೆ’. ಈಗಾಗಲೇ ಪೆಪೆ ಸಿನಿಮಾದ ಪೋಸ್ಟರ್​​ಗಳು ಹಾಗೂ ಈ ಹಿಂದೆ ಬಿಟ್ಟ ಟೀಸರ್​​ಗಳು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ವಿನಯ್​​ರಾಜ್​​ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಡಿಸಿರುವ ಈ ಸಿನಿಮಾ ಆಗಸ್ಟ್ 30ರಂದು ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ.

ಇದೀಗ ‘ಪೆಪೆ’ ಶೋ ರೀಲ್ ನೋಡಿ ಕಿಚ್ಚ ಸುದೀಪ್ ಫಿದಾ ಆಗಿದ್ದಾರೆ. ವಿನಯ್ ರಾಜ್ ಕುಮಾರ್ ಕಿಚ್ಚ ಸುದೀಪ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೆಪೆ ಸಿನಿಮಾದ ಶೋ ರೀಲ್ ನೋಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ.

‘ಪೆಪೆ’ ಶೋ ರೀಲ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ ಕಿಚ್ಚ ಸುದೀಪ್ ಅವರು, ಇಂಥ ಪಾತ್ರದಲ್ಲಿ ವಿನಯ್ ಅವರನ್ನ ನೋಡಲು ನಾನು ಇಷ್ಟ ಪಡುತ್ತೇನೆ. ಯಾವತ್ತಿಗೂ ಪಾತ್ರ ಮಾತನಾಡ ಬೇಕು. ಹೀರೋಗಿಂತ ಪಾತ್ರ ದೊಡ್ಡದು. ವಿನಯ್ ನಿರ್ವಹಿಸುರುವ ಪಾತ್ರದ ಸಖತ್ ಕುತೂಹಲ ಮೂಡಿಸಿದೆ. ಇಂಥಹ ಸಿನಿಮಾಗಳನ್ನ ನೀವು ಮಾಡಿ , ನಿಮಗೆ ಒಪ್ಪುತ್ತದೆ. ಖಂಡಿತವಾಗಿ ನಾನು ಈ ನಿಮ್ಮ ಸಿನಿಮಾಕ್ಕೆ‌ ಸಪೋರ್ಟ್ ಮಾಡ್ತಿನಿ ಎಂದಿದ್ದಾರೆ.

ಇನ್ನು ರೋಜ್ಹ್ ಹಿಡಿದು ಮರ ಸುತ್ತೋ ಪಾತ್ರಕ್ಕಿಂತ ಇಂಥ ಮಾಸ್ ಪಾತ್ರಗಳನ್ನ ಮಾಡಬೇಕು. ಪೆಪೆ ಪಾತ್ರ ನಿಮಗೆ‌ ಒಪ್ಪುತ್ತದೆ. ಹೊಸ ಹೀರೋಗಳು ನಮ್ ಇಂಡಸ್ಟ್ರಿಗೆ ಬೇಕಾಗಿದೆ. ಈ ಸಿನಿಮಾವನ್ನು ಜನರಿಗೆ ದೊಡ್ಡ ಮಟಕ್ಕೆ ತಲುಪಿಸಿ. ಪ್ರೇಕ್ಷಕರು ಖಂಡಿತವಾಗಿ ಕೈ ಹಿಡಿಯುತ್ತಾರೆ. ನನ್ನ ಪೂರ್ತಿ ಬೆಂಬಲ ಪೆಪೆ ತಂಡದ ಮೇಲೆ ನಿಮ್ಮ ಮೇಲೆ ಇರುತ್ತದೆ ಎಂದು ಮನಸಾರೆ ಆಲ್ ದಿ ಬೆಸ್ಟ್ ಹೇಳಿ ಹರಸಿದ್ದಾರೆ.

ಇದನ್ನೂ ಓದಿ : ಬಾಗಲಕೋಟೆ : ಭ್ರೂಣ ಹತ್ಯೆ, ಮಹಿಳೆ ಸಾ*ವು ಕೇಸ್ – ಇಬ್ಬರು ಅಧಿಕಾರಿಗಳು ಅಮಾನತು..!

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here

16:05