ಆಶಿಕಾ ರಂಗನಾಥ್ ಸಂಬಂಧಿ ಅಚಲ ಆತ್ಮಹತ್ಯೆ ಕೇಸ್ – ಪೊಲೀಸರ ಕೈಸೇರಿದ CDR ರಿಪೋರ್ಟ್, ಆರೋಪಿ ಜೊತೆ ಸಂಪರ್ಕ ಪತ್ತೆ!

ಬೆಂಗಳೂರು : ನಟಿ ಆಶಿಕ ರಂಗನಾಥ್ ಸಂಬಂಧಿ ಅಚಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾಗಿದೆ. ಇದೀಗ ಮೃತ ಅಚಲಾಳ ಸಿಡಿಆರ್ ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ಅಚಲಾಳ ಸಿಡಿಆರ್( ಕಾಲ್ ಡಿಟೇಲ್ಸ್ ರೆಕಾರ್ಡ್) ನಲ್ಲಿ ಆರೋಪಿ ಜೊತೆ ಸಂಪರ್ಕ ಇರೋದು ಪತ್ತೆಯಾಗಿದೆ.

ಪೊಲೀಸ್ ತನಿಖೆಯಲ್ಲಿ ಮೃತ ಅಚಲಾ ಮತ್ತು ಆರೋಪಿ ಮಯಾಂಕ್ ಎಂಬಾತನ ನಡುವೆ ಹಲವು ಬಾರಿ ಪೋನ್ ಕಾಲ್ ಮಾಡಿರೋದು ಬೆಳಕಿಗೆ ಬಂದಿದೆ. ಸಿಡಿಆರ್ ರಿಪೋರ್ಟ್ ಪೊಲೀಸರ ಕೈ ಸೇರ್ತಿದ್ದಂತೆ ಆರೋಪಿ ಪೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು, ಪೊಲೀಸರು ನೋಟಿಸ್ ಕೊಡ್ತಾರೆ ವಿಚಾರಣೆಗೆ ಕರಿತಾರೇ ಅನ್ನೋ ಭಯದಲ್ಲಿ ಮಯಾಂಕ್ ಎಸ್ಕೇಪ್ ಆಗಿದ್ದಾನೆ.

ಸದ್ಯ ಹಾಸನ ಬೆಂಗಳೂರಿನಲ್ಲಿ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಚಲಾಳ ಐಪೋನ್ FSLಗೆ ರವಾನೆ ಮಾಡಲಾಗಿದೆ. ವಾಟ್ಸಾಪ್ ಡೇಟಾ ರಿಟ್ರೀವ್​ ಮಾಡಲು ಪೊಲೀಸರು FSLಗೆ ಅಚಲಾ ಮೊಬೈಲ್ ನೀಡಿದ್ದು, ಅಚಲಾಳ ವಾಟ್ಸಾಪ್ ರಿಟ್ರೀವ್ ಆದ್ರೆ ಪ್ರಕರಣಕ್ಕೆ ಮತ್ತಷ್ಟು ಸಾಕ್ಷ್ಯ ದೊರಕಲಿದೆ.

ಏನಿದು ಪ್ರಕರಣ? ನ.21ರಂದು ಹಾಸನ ಮೂಲದ ಅಚಲ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಬಳಿಕ ಅಚಲಳ ತಂದೆ ಹರ್ಷ ಅವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಗಳ ಸಾವಿಗೆ ನೇರ ಕಾರಣ ಮಯಾಂಕ್ ಗೌಡ. ಅಚಲಳಿಗೆ ಪ್ರೀತಿಸುವುದಾಗಿ ನಂಬಿಸಿ ಸುತ್ತಾಡಿದ್ದ. ಲೈಂಗಿಕವಾಗಿ ಸಹಕರಿಸಲು ಒತ್ತಾಯ ಮಾಡುತ್ತಿದ್ದ. ಅದಕ್ಕೆ ಅಚಲ ಒಪ್ಪಿಕೊಳ್ಳದೆ ಇದ್ದಾಗ ಆಕೆಗೆ ಹಲವು ಬಾರಿ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ಮೃತ ಅಚಲ ತಂದೆ ಹರ್ಷ ನೀಡಿದ್ದ ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಮಯಾಂಕ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ!

Btv Kannada
Author: Btv Kannada

Read More