ಬೆಂಗಳೂರು : ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ನಡೆದಿದೆ. ಅಮೂಲ್ಯ(23)ನೇಣಿಗೆ ಶರಣಾದ ನವವಿವಾಹಿತೆ.
ಇಂದಿಗೆ ಅಮೂಲ್ಯ- ಅಭಿಷೇಕ್ ಮದುವೆ ಆಗಿ 3 ತಿಂಗಳಾಗಿದೆ. ಅಮೂಲ್ಯ ನಿವಾಸ ಅಂದ್ರಹಳ್ಳಿಯಲ್ಲಿದ್ದು, ಅಭಿಷೇಕ್ ವಿದ್ಯಾಮಾನ್ ನಗರದಲ್ಲಿ ವಾಸವಿದ್ದ. ಅಕ್ಕಪಕ್ಕದ ಏರಿಯಾದವರಾಗಿದ್ರಿಂದ ಇಬ್ಬರಿಗೂ ಪ್ರೀತಿಯಾಗಿತ್ತು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ರು. ಆದ್ರೆ ಇಂದು ಏಕಾಏಕಿ ಅಭಿಷೇಕ್ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾಳೆ.
ಅಮೂಲ್ಯ ಸಾವಿಗೆ ಅಭಿಷೇಕ್ ಕುಟುಂಬಸ್ಥರೆ ಕಾರಣ ಎಂದು ಅಮೂಲ್ಯ ಮನೆಯವರು ಆರೋಪ ಮಾಡ್ತಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಜೈಲಿನಲ್ಲಿ ರಾಜಾತಿಥ್ಯ ಕೇಸ್ – ಶಂಕಿತ ಉಗ್ರನ ವಿಡಿಯೋ ವೈರಲ್ ಬೆನ್ನಲ್ಲೇ ಹೈ ಅಲರ್ಟ್ ಆದ NIA!
Author: Btv Kannada
Post Views: 317







