ಬೀದರ್​ನ ಬಸವೇಶ್ವರ ಜಾತ್ರೆಯಲ್ಲಿ ಭೀಕರ ದುರಂತ – ರಥದ ಚಕ್ರಕ್ಕೆ ಸಿಲುಕಿ ಇಬ್ಬರಿಗೆ ಗಂಭೀರ ಗಾಯ!

ಬೀದರ್ : ರಥದ ಗಾಲಿಗೆ ಸಿಲುಕಿ ಇಬ್ಬರ ಕಾಲಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೀದರ್ ಜಿಲ್ಲೆಯ ಶ್ರೀ ಬಸವೇಶ್ವರ ಜಾತ್ರೆಯಲ್ಲಿ ನಡೆದಿದೆ.

ರಥೋತ್ಸವದ ವೇಳೆ ಈ ಭೀಕರ ದುರಂತ ನಡೆದಿದ್ದು, ಧನರಾಜ್ ಎಂಬುವವರ ಎರಡು ಕಾಲಿಗೆ ಗಂಭೀರ ಗಾಯಗಳಾಗಿದೆ. ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿದೆ.

ಬಸವಭಕ್ತರು ಉತ್ಸಾಹದಿಂದ ರಥವನ್ನು ಎಳೆಯಲು ಮುಂದಾಗಿದ್ದರು. ಈ ವೇಳೆ ಏಕಾಏಕಿ ನುಕಾಟ ತಳ್ಳಾಟ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಗಾಯಾಳುವನ್ನು ಕಲ್ಬುರ್ಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : ಲೋಕಾಯುಕ್ತ ಬಲೆಗೆ ಬಿದ್ದ ಕೆರೂರು ಠಾಣೆ PSI, PC – ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!

Btv Kannada
Author: Btv Kannada

Leave a Comment

Read More