ಲೆನ್ಸ್‌ಕಾರ್ಟ್ ವಿವಾದ – ಭಾರಿ ಆಕ್ರೋಶದ ಬೆನ್ನಲ್ಲೇ ಕ್ಷಮೆಯಾಚನೆ.. ಸಿಬ್ಬಂದಿ ಮಾಂಗಲ್ಯ ಧರಿಸಲು ಸಮ್ಮತಿ!

ನವದೆಹಲಿ : ಹಿಂದೂ ನೌಕರರಿಗೆ ಧಾರ್ಮಿಕ ಸಂಕೇತಗಳನ್ನು ನಿಷೇಧಿಸಿ ವಿವಾದಕ್ಕೀಡಾಗಿದ್ದ ಪ್ರಸಿದ್ಧ ಕನ್ನಡಕ ಮಾರಾಟ ಸಂಸ್ಥೆ ‘ಲೆನ್ಸ್‌ಕಾರ್ಟ್’, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಮಣಿದು ಅಧಿಕೃತವಾಗಿ ಕ್ಷಮೆಯಾಚಿಸಿದೆ. ತನ್ನ ಹಳೆಯ ನಿಯಮವನ್ನು ಹಿಂಪಡೆದಿರುವ ಸಂಸ್ಥೆ, ಇದೀಗ ನೌಕರರ ಹಿತದೃಷ್ಟಿಯಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಹೊಸ ಮಾರ್ಗಸೂಚಿಯ ಪ್ರಕಾರ, ನೌಕರರು ತಮ್ಮ ತಮ್ಮ ಧಾರ್ಮಿಕ ಮತ್ತು ನಂಬಿಕೆಯ ಸಂಕೇತಗಳನ್ನು ಧರಿಸಲು ಸ್ವತಂತ್ರರು. ಅದರಲ್ಲಿ ಬಿಂದಿ, ತಿಲಕ, ಸಿಂದೂರ, ಮಂಗಳಸೂತ್ರ, ಹಿಜಾಬ್ ಮತ್ತು ಪೇಟದಂತ ವಸ್ತುಗಳೂ ಸೇರಿವೆ ಎಂದು ಸ್ಪಷ್ಟಪಡಿಸಿದೆ.

ಈ ನಡುವೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಲೆನ್ಸ್ ಕಾರ್ಟ್ ಸಂಸ್ಥೆಯ ಅಂಗಡಿಗಳ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ, ಅಲ್ಲಿದ್ದ ಸಿಬ್ಬಂದಿಗೆ ತಿಲಕ ಹಚ್ಚುವ ಮೂಲಕ ವಿನೂತನವಾಗಿ ಸಂಸ್ಥೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಶುಭ್‌ಮನ್ ಗಿಲ್ ಮಾಡಿರೋ ಈ ಕೆಲಸಕ್ಕೆ ಅಮ್ಮಂದಿರು ಬೈಯೋದು ಗ್ಯಾರಂಟಿ – ಅಷ್ಟಕ್ಕೂ ಗಿಲ್ ಮಾಡಿದ್ದೇನು?

Btv Kannada
Author: Btv Kannada

Leave a Comment

Read More

Read More