ಬೆಂಗಳೂರು : ಸಾಹಿತಿಗಳಿಗೆ ಪ್ರೋತ್ಸಾಹ ನೀಡುವುದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅತ್ಯಗತ್ಯವೆಂದು ಭಾವಿಸದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದ ಬಹುಮುಖಿ ಪರಂಪರೆಯನ್ನು ಪ್ರತಿನಿಧಿಸುವ ಕನ್ನಡ ಸಾಮರಸ್ಯ ನೆಲೆಗಳು ಶೀರ್ಷಿಕೆಯಡಿ 41 ಕೃತಿಗಳ ಲೋಕಾರ್ಪಣೆ ಸಮಾರಂಭವು ಏ.15 ರಂದು ವಿಧಾನಸೌಧದ ಬ್ಯಾಂಕ್ ವೆಟ್ ಹಾಲ್ನಲ್ಲಿ ಜರುಗಿತು.

ಈ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಡಿ.ಸಿ. ರಾಮಚಂದ್ರ ಅವರ ಲೇಖನಿಯಿಂದ ಹೊರಬಂದ ನಾಥ ಪರಂಪರೆ ಕೃತಿಯು ಲೋಕಾರ್ಪಣೆಗೊಂಡಿತು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಿ 41 ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

ಈ ಕಾರ್ಯಕ್ರಮದಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪುರುಷೋತ್ತಮ ಬಿಳಿಮಲೆಯವರು, ಕಾರ್ಯದರ್ಶಿಗಳಾದ ಡಾಕ್ಟರ್ ಸಂತೋಷ ಹಾನಗಲ್ ರವರು, ಸರ್ಕಾರದ ಇನ್ನಿತರ ಸಚಿವರು, ಶಾಸಕರು ಸಾಹಿತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ. ಡಿ. ಸಿ. ರಾಮಚಂದ್ರರವರಿಂದ ಸಾರಸ್ವತ ಲೋಕವನ್ನು ಪ್ರವೇಶಿಸುತ್ತಿರುವ ನಾಥ ಪರಂಪರೆಯು ಇವರ ಏಳನೇ ಕೃತಿಯಾಗಿದೆ. ದೇಶದ ಸ್ವಾಭಿಮಾನವನ್ನು, ಸಂಸ್ಕೃತಿಯನ್ನು ವಿಶ್ವದ ಉದ್ದಗಲಕ್ಕೂ ಬೆಳಗಿಸಿದ ಹಲವು ಭಕ್ತಿ ಪಂಥಗಳಲ್ಲಿ ನಾಥಪಂಥವು ಒಂದಾಗಿದೆ. ಮುಂದಿನ ಪೀಳಿಗೆಗೆ ನಾಥ ಸಂಸ್ಕೃತಿಯ ಚರಿತ್ರೆಯ ಪುಟಗಳನ್ನು ತೆರೆದಿಡುವ ಕಿರು ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿರುವುದಾಗಿ ಲೇಖಕರಾದ ಡಾ. ಡಿ.ಸಿ ರಾಮಚಂದ್ರ ರವರ ಅಭಿಮತವಾಗಿದೆ.

ಈ ಸಂದರ್ಭದಲ್ಲಿ ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡ ಸೋಮನಹಳ್ಳಿಯ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ), ತಾಲ್ಲೂಕಿನ ಸಾಹಿತ್ಯಾಸಕ್ತರು, ಸಂಪ್ರೀತಿ ಪತ್ರಿಕೆಯ ಓದುಗರು, ದೊಡ್ಡಸೋಮನಹಳ್ಳಿ ಗ್ರಾಮಸ್ಥರು, ಮಿತ್ರರು ಡಾ. ಡಿ.ಸಿ.ರಾಮಚಂದ್ರರವರನ್ನ ಅಭಿನಂದಿಸಿದ್ದಾರೆ. ಇವರ ಲೇಖನಿಯಿಂದ ಮತ್ತಷ್ಟು ಕೃತಿಗಳು ಸಾಹಿತ್ಯ ಲೋಕವನ್ನು ಪ್ರವೇಶಿಸಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ : ನಟ ಪ್ರೇಮ್ ಬರ್ತ್ಡೇಗೆ ಪೋಸ್ಟರ್ ರಿಲೀಸ್ – ಐತಿಹಾಸಿಕ ಪಾತ್ರದಲ್ಲಿ ಲವ್ಲಿ ಸ್ಟಾರ್!









