ಆರ್‌ಎಸ್‌ಎಸ್ ಪಥಸಂಚಲನ ನಿಲ್ಲಿಸಲು ಆಗುತ್ತಾ: ಸರ್ಕಾರದ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು; ಜಾತಿಗಣತಿ ಬಗ್ಗೆ ತೀವ್ರ ಆಕ್ರೋಶ!

ಮಂಗಳೂರು : ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಳಿಗೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು ನವೆಂಬರ್ 2 ರಂದು ಚಿತ್ತಾಪುರದಲ್ಲಿ ನಿಗದಿಯಾಗಿರುವ ಸಂಘದ ಪಥಸಂಚಲನ ನಡೆಯಲಿದೆ. “ಅದನ್ನು ಹೊಡೆದು ಬಡೆದು ನಿಲ್ಲಿಸಲು ಆಗುತ್ತಾ?” ಎಂದು ಸವಾಲು ಹಾಕಿದ್ದಾರೆ.

ಯಾವುದೇ ಸಂಕಷ್ಟ ಬಂದಾಗ ರಕ್ಷಣೆಗೆ ನಿಂತದ್ದು ಆರ್‌ಎಸ್‌ಎಸ್ ಎಂದು ಪ್ರತಿಪಾದಿಸಿದ ಭಟ್, ಕಾಂಗ್ರೆಸ್ ನವರೂ ಸಹ ಇದನ್ನು ಒಳಗೊಳಗೆ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಲ್ಲೇಖಿಸಿ ಮಾತನಾಡಿದರು.

ಪ್ರಿಯಾಂಕ್ ಖರ್ಗೆಯವರಿಗೆ ನೆನಪಿಲ್ಲ, ಆದರೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಲ್ಪ ನೆನಪಿದೆ. “ಖರ್ಗೆಯವರ ಹಿರಿಯರನ್ನು ಹೈದರಾಬಾದ್‌ನ ರಝಾಕಾರ್ ಎಂಬ ಮುಸಲ್ಮಾನರು ಅವರ ಕುಟುಂಬವನ್ನೇ ನಾಶ ಮಾಡಿದ್ದಾರೆ. ಹೌದೋ ಅಲ್ವೋ ಎಂದು ಒಮ್ಮೆ ಅವರನ್ನೇ ಕೇಳಿ,” ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ಅವರಿಗೆ ಮರೆತು ಹೋಗಿದೆ, ಸಮಾಜವನ್ನು ರಕ್ಷಿಸುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ ಎಂದು ಪ್ರಭಾಕರ್ ಭಟ್ ಪ್ರತಿಪಾದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಜಾತಿಗಣತಿ ವಿಚಾರವನ್ನು ಪ್ರಸ್ತಾಪಿಸಿದ ಕಲ್ಲಡ್ಕ ಪ್ರಭಾಕರ್ ಭಟ್, “ಸಮಾಜವನ್ನು ಒಡೆಯಬೇಕೆಂಬುದೇ ಇವತ್ತು ಜಾತಿಗಣತಿ ಮಾಡುತ್ತಿರುವ ಮುಖ್ಯಮಂತ್ರಿಯ ಉದ್ದೇಶ. ಇದು ಸಮಾಜವನ್ನು ಒಡೆಯುವ ದೊಡ್ಡ ಪ್ರಯತ್ನ” ಎಂದು ಗಂಭೀರ ಆರೋಪ ಮಾಡಿದ್ದಾರೆ.

 

ಮುಂದುವರೆದು, “ಮುಸಲ್ಮಾನರಲ್ಲಿ 111 ಜಾತಿಗಳಿವೆ, ಆದರೆ ಅವರ ಜಾತಿ ಯಾವುದೆಂದು ಕೇಳಿಲ್ಲ. ಹಿಂದೂ ಸಮಾಜವನ್ನು ಒಡೆಯುವ ಕೆಲಸ ಆಗ್ತಿದೆ” ಎಂದು ಭಟ್ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಜಾತಿಗಣತಿ ಪ್ರಯತ್ನವು ಹಿಂದೂ ಸಮಾಜವನ್ನು ಒಡಿಯುವ ಕೆಲಸ ಆಗ್ತಿದೆ.

ಇದನ್ನೂ ಓದಿ : ಪ್ರಿಯಕನಿಂದಲೇ 35 ವರ್ಷದ ಮಹಿಳೆ ಕೊಲೆ; ಆಟೋದಲ್ಲಿ ಶವ ಬಿಸಾಡಿ ಪ್ರಿಯಕ ಎಸ್ಕೆಪ್!

 

Btv Kannada
Author: Btv Kannada

Read More