ಬೆಂಗಳೂರು : ರೌಡಿಶೀಟರ್ ಬಿಕ್ಲ ಶಿವ ಕೊಲೆ ಕೇಸ್ ಸಂಬಂಧ ಕೊಕಾ ಆ್ಯಕ್ಟ್ ಪ್ರಶ್ನಿಸಿ ಶಾಸಕ ಬೈರತೀ ಬಸವರಾಜ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾ. ಎಸ್ ಸುನಿಲ್ ದತ್ ಯಾದವ್ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಬೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದ್ದಾರೆ.
ಬೈರತಿ ಬಸವರಾಜ್ ವಿರುದ್ದವೂ ಕೊಕಾ ಆ್ಯಕ್ಟ್ ಹಾಕಿದ್ದು, ಅದಕ್ಕೆ ಸಿಐಡಿ ಮುಖ್ಯಸ್ಥರು ಕೂಡ ಅನುಮತಿ ನೀಡಿದ್ದಾರೆ. ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಇಲ್ಲಿ ಗ್ಯಾಂಗ್ ಯಾವುದು? ಬಸವರಾಜ್ ಯಾರು? ಬೈರತೀ ಬಸವರಾಜ್ ಅವರಿಗೆ ಈ ಕಾಯ್ದೆ ಹೇಗೆ ಅನ್ವಯಿಸುತ್ತದೆ? ಕೊಕಾ ಆ್ಯಕ್ಟ್ ದಾಖಲಿಸಲು ಕನಿಷ್ಠ ಮೂರು ವರ್ಷ ಶಿಕ್ಷೆ ಪ್ರಕರಣದಲ್ಲಿ ಸಂಜ್ಞೆ ತೆಗೆದುಕೊಂಡಿರಬೇಕು. ಇಲ್ಲಿ ಅದ್ಯಾವುದೂ ಆಗಿಲ್ಲ, ಆದರೂ ಕೊಕಾ ಆ್ಯಕ್ಟ್ ಹಾಕಿದ್ದಾರೆ, ಕೊಕಾ ಕಾಯ್ದೆ ಅನ್ವಯಿಸುವ ಆದೇಶ ನೀಡುವಾಗ ವಿವೇಚನೆ ಬಳಸಿಲ್ಲ ಎಂದಿದ್ದಾರೆ.
ಅರ್ಜಿ ಆಕ್ಷೇಪಣೆ ಸಲ್ಲಿಕೆಗೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠ ಅಕ್ಟೋಬರ್ 23ಕ್ಕೆ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ : ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ್ದ ಆರೋಪಿ ಅರೆಸ್ಟ್!







