ಸಕ್ಕರೆ ನಾಡು ಮಂಡ್ಯದಲ್ಲಿ ‘ಕೇಸರಿ’ ರಣಕಹಳೆ – ಕೆರಗೋಡು ಗಣೇಶೋತ್ಸವಕ್ಕೆ ಶಾಸಕ ಯತ್ನಾಳ್ ಜೆಸಿಬಿಯಲ್ಲಿ ಎಂಟ್ರಿ‌!

ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ‘ಕೇಸರಿ’ ರಣಕಹಳೆ ಮೊಳಗಿದ್ದು, ಜಿಲ್ಲೆಯ ರಸ್ತೆ, ಓಣಿಗಳು, ಹಳ್ಳಿ-ಪೇಟೆಗಳನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇಸರಿಮಯಗೊಳಿಸಿದ್ದಾರೆ. ಮಂಡ್ಯದಲ್ಲಿ ಹಿಂದೆಂದೂ ಕಂಡರಿಯದ ಹಿಂದುತ್ವದ ಘರ್ಜನೆ ಜೋರಾಗಿದ್ದು, ಇದೀಗ ಜೆಡಿಎಸ್​- ಕಾಂಗ್ರೆಸ್​ ನೆಲದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ.

ಶಾಸಕ ಯತ್ನಾಳ್ ಕೆರೆಗೋಡಿನ ಗಣೇಶೋತ್ಸಕ್ಕೆ ಜೆಸಿಬಿಯಲ್ಲಿ ಎಂಟ್ರಿ‌ ಕೊಟ್ಟಿದ್ದು, ಹಿಂದುತ್ವದ ಫೈರ್​ ಬ್ರಾಂಡ್​ ಯತ್ನಾಳ್​ಗೆ ಕೆರಗೋಡಿನಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಲಕ್ಷಾಂತರ ಹಿಂದುತ್ವ ಕಾರ್ಯಕರ್ತರು ಭಾಗಿಯಾಗಿದ್ದರು.

ಯತ್ನಾಳ್ ಮಂಡ್ಯದ ಕಾಳಿಕಾಂಭ ದೇಗುಲದಿಂದ ಆರಂಭವಾಗಿದ್ದ ಗಣೇಶೋತ್ಸವ ಬೃಹತ್ ಜಾಥಾ ಮೂಲಕ ಕೆರಗೋಡಿಗೆ ಆಗಮಿಸಿದ್ದು, ಕೆರಗೋಡು ಗ್ರಾಮದಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆ ಮಂಡ್ಯ ಕೇಸರಿಮಯವಾಗಿದೆ. ಮಂಡ್ಯದಾದ್ಯಂತ ಹಿಂದುತ್ವ ಕಾರ್ಯಕರ್ತರ ಬೃಹತ್ ಬೈಕ್ ಜಾಥಾ ನಡೆಸಿದ್ದು, ಪೇಟೆ ಬೀದಿ, ಹೊಳಲು ಸರ್ಕಲ್​, ಕಾರಿಮನೆ ಗೇಟ್​, ಚಿಕ್ಕಮಂಡ್ಯದಲ್ಲಿ ಕೇಸರಿ ಅಬ್ಬರ ಶುರುವಾಗಿದೆ.

ಸಾತನೂರು, ಹುಲಿವಾನ, ಕರೆಗೋಡಿನಲ್ಲಿ ಲಕ್ಷಾಂತರ ಹಿಂದೂ ಕಾರ್ಯಕರ್ತರು ಘರ್ಜಿಸಿದ್ದಾರೆ. ಮಂಡ್ಯದಲ್ಲಿ ಎಲ್ಲೆಲ್ಲೋ ಕೇಸರಿ ಧ್ವಜಗಳು, ಹಿಂದುತ್ವದ ಘೋಷಣೆ ಕೂಗಿದ್ದು, ಹಿಂದುತ್ವ-ಬಿಜೆಪಿ ಕಾರ್ಯಕರ್ತರ ಅಬ್ಬರ ಕಂಡು ಕಾಂಗ್ರೆಸ್ ನಾಯಕರು ಈಗ ತತ್ತರಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ತಂದೆ ಸಾವಿನಿಂದ ಮನನೊಂದು ಮಗಳು ಆತ್ಮಹತ್ಯೆ!

Btv Kannada
Author: Btv Kannada

Read More