ದಸರಾ ಬೆನ್ನಲ್ಲೇ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ – ಅನ್ನಭಾಗ್ಯ ಅಕ್ಕಿ ಪಡೆಯಲು ಬಂದವರ BPL ಕಾರ್ಡ್​ಗಳೇ ರದ್ದು!

ನೆಲಮಂಗಲ : ದಸರಾ ಹಬ್ಬ ಮುಗಿದ ಬೆನ್ನಲ್ಲೇ BPL ಕಾರ್ಡ್​ದಾರರಿಗೆ ಬಿಗ್ ಶಾಕ್ ಎದುರಾಗಿದೆ. ಅನ್ನ ಭಾಗ್ಯ ಅಕ್ಕಿ ಪಡೆಯಲು ಬಂದವರ BPL ಕಾರ್ಡ್​ಗಳೇ ರದ್ದಾಗಿರುವಂತಹ ಘಟನೆ ನೆಲಮಂಗಲದಲ್ಲಿ ನಡೆದಿದೆ.

ನ್ಯಾಯಬೆಲೆ ಅಂಗಡಿಗಳ ಮುಂದೆ ಅನ್ನ ಭಾಗ್ಯ ಯೋಜನೆಯ ಪಡಿತರ ಚೀಟಿದಾರರಿಗೆ BPL ಕಾರ್ಡ್ ಡಿಲೀಟ್ ನೋಟಿಸ್ ನೀಡಿದ್ದಾರೆ. ಪಡಿತರ ಧಾನ್ಯ ಪಡೆಯಲು ಬಂದ ಸಾರ್ವಜನಿಕರು ನೋಟಿಸ್ ಬೋರ್ಡ್​ನಲ್ಲಿ ಹೆಸರುಗಳನ್ನು ನೋಡಿ ದಂಗಾಗಿದ್ದಾರೆ. ನೆಲಮಂಗಲದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ‌ ಕಾರ್ಡ್ ಪರಿಷ್ಕರಣೆ ಮಾಡಲಾಗಿದ್ದು, ಸುಮಾರು 4,000 ಪಡಿತರ ಕಾರ್ಡ್​ದಾರರಿಗೆ ಆಹಾರ ಇಲಾಖೆ ನೋಟಿಸ್ ನೀಡಿದೆ. ಇದೀಗ ರಾಜ್ಯ ಸರ್ಕಾರ ಅನ್ನಭಾಗ್ಯ ಪಡಿತರಕ್ಕೆ ಬ್ರೇಕ್ ಹಾಕಲು ಮುಂದಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ನೆಲಮಂಗಲ ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ವಾರ್ಷಿಕ 1 ಲಕ್ಷದ ಇಪ್ಪತ್ತು ಸಾವಿರ ಆದಾಯ ತೋರಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ : ಮೆಟ್ರೋ ನಿಲ್ದಾಣಕ್ಕೆ ʻಬಸವಣ್ಣʼ ಹೆಸರು – ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಘೋಷಿಸಿದ ಸಿಎಂ!

Btv Kannada
Author: Btv Kannada

Read More