ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದೀಗ ವಿವಾಹದ ನಂತರ ಮೊದಲ ಬಾರಿಗೆ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ತಮ್ಮ ಹುಟ್ಟೂರಾದ ಕೊಡಗಿಗೆ ಭೇಟಿ ನೀಡಿದ್ದಾರೆ.

ಏಪ್ರಿಲ್ 5ರಂದು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಲು ಈ ತಾರಾ ಜೋಡಿ ಕೊಡಗಿನ ವಿರಾಜಪೇಟೆಗೆ ಆಗಮಿಸಿದ್ದು, ಹುಟ್ಟುಹಬ್ಬದ ಅಂಗವಾಗಿ ವಿರಾಜಪೇಟೆ ನಗರದ ʻಸೆರೆನಿಟಿ ಹಾಲ್ʼನಲ್ಲಿ ಅದ್ಧೂರಿ ಡಿನ್ನರ್ ಪಾರ್ಟಿ ಆಯೋಜಿಸಲಾಗಿತ್ತು.

ರಶ್ಮಿಕಾಗೆ ತಂದೆಯಿಂದ ಅತ್ಯಮೂಲ್ಯ ಉಡುಗೊರೆ ಸಿಕ್ಕಿದೆ. ತಂದೆ ಮದನ್ ಮಂದಣ್ಣ ಅವರು ಮಗಳಿಗೆ ಕೊಡಗಿನಲ್ಲಿರುವ ಒಂದು ಅದ್ದೂರಿ ಬಂಗಲೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಡಿನ್ನರ್ ಪಾರ್ಟಿಯಲ್ಲಿ ವಿರಾಜಪೇಟೆಯ ಗಣ್ಯರು, ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದೆ.
ಇದನ್ನೂ ಓದಿ : ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ರಿಲೀಸ್ – 22ರ ಹರೆಯದ ನಿರ್ದೇಶಕಿಯ ಅಪೂರ್ವ ಪ್ರಯತ್ನ!
Author: Btv Kannada
Post Views: 660








