ಪತ್ನಿ ಕುತ್ತಿಗೆ ಮೇಲೆ ಕಾಲಿಟ್ಟು ಪತಿ ಕೊಲೆ ಮಾಡಿದ್ದ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪೊಲೀಸರು ಈ ಘಟನೆ ಬಗ್ಗೆ ತನಿಖೆ ಮಾಡಿದ್ದು, ಆರೋಪಿ ದನಿಯಪ್ಪ ಕೊಲೆ ಬಗ್ಗೆ ಎಲ್ಲಾ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

ಕೋಟಿ ಕೋಟಿ ರೂಪಾಯಿ ಆಸ್ತಿ ಮತ್ತು ರಾಜಕೀಯ ಹಂಬಲದ ಕಾರಣಕ್ಕೆ ಪತ್ನಿ ಕಾವ್ಯಾಳನ್ನು ಪತಿ ದನಿಯಪ್ಪ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಂದಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಪೀಣ್ಯಾದಲ್ಲಿರುವ 3-4 ಕೋಟಿ ಮೌಲ್ಯದ ಮನೆ ಹಾಗೂ ಇತರೆ ಆಸ್ತಿಗಳು ಪತ್ನಿ ಕಾವ್ಯ ಹಾಗೂ ತಾಯಿಯ ಹೆಸರಿನಲ್ಲಿದ್ದವು. ಬೆಂಗಳೂರಿನ ಈ ಎಲ್ಲಾ ಆಸ್ತಿಗಳನ್ನು ಮಾರಿ, ಆ ಹಣದೊಂದಿಗೆ ಊರಿಗೆ ಹೋಗಿ ಸೆಟ್ಲ್ ಆಗಿ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದು ದನಿಯಪ್ಪನ ಉದ್ದೇಶವಾಗಿತ್ತು.
ಇದೇ ಕಾರಣಕ್ಕೆ ದನಿಯಪ್ಪ ಪತ್ನಿ ಕೊಲೆ ಮಾಡುವ ಎರಡು ದಿನದ ಮುಂಚೆ ಅಥಣಿಯಲ್ಲಿ ಗ್ರಾಮಸ್ಥರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಿದ್ದ. ಈ ಮೂಲಕ ರಾಜಕೀಯಕ್ಕೆ ಹೋಗಲು ಪ್ಲಾನ್ ಮಾಡಿದ್ದ. ಆದರೆ ಪತ್ನಿ ಕಾವ್ಯ ಬೆಂಗಳೂರು ಬಿಟ್ಟು ಹೋಗೋದು ಬೇಡ, ಮಾರಾಟ ಮಾಡಲು ಬಿಡುವುದಿಲ್ಲ ಎಂದಿದ್ದಾಳೆ.

ಈ ಕಾರಣಕ್ಕೆ ಪ್ರೀ ಪ್ಲಾನ್ ಮಾಡಿ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಮಕ್ಕಳು ಶಾಲೆಗೆ ಹೋದ ಬಳಿಕ ಗಲಾಟೆ ತೆಗೆದು ದನಿಯಪ್ಪ ಪತ್ನಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ. ಪರಿಪರಿಯಾಗಿ ಬೇಡಿಕೊಂಡ್ರೂ ಬಿಡದೆ ಹತ್ಯೆಗೈದಿದ್ದಾನೆ. ಈ ಪ್ರಕರಣ ಸಂಬಂಧ ಪೀಣ್ಯಾ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ‘ಲೋಕಾ’ ರೇಡ್!









