Download Our App

Follow us

Home » ಅಪರಾಧ » ನನ್ನ ಬಳಿ ಯಾವುದೇ ಸ್ವಂತ ಮೊಬೈಲ್ ಇಲ್ಲ : ಪ್ರಜ್ವಲ್ ರೇವಣ್ಣ ಹೊಸ ವರಸೆ..!

ನನ್ನ ಬಳಿ ಯಾವುದೇ ಸ್ವಂತ ಮೊಬೈಲ್ ಇಲ್ಲ : ಪ್ರಜ್ವಲ್ ರೇವಣ್ಣ ಹೊಸ ವರಸೆ..!

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ಈಗಾಗಲೇ ಬಂಧಿಸಿದ್ದು, ಇಂದು ಕಸ್ಟಡಿ ಅವಧಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೊಮ್ಮೆ ವಶಕ್ಕೆ ಪಡೆಯಲು ಎಸ್ಐಟಿ ಸಜ್ಜಾಗಿದೆ.

ಈಗಾಗಲೇ ಹೊಳೆನರಸೀಪುರದ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್‌ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮತ್ತೊಂದೆಡೆ, ಅಶ್ಲೀಲ ವಿಡಿಯೋಗಳು ಚಿತ್ರೀಕರಣಗೊಂಡಿವೆ ಎನ್ನಲಾದ ಮೂಲ ಮೊಬೈಲ್‌ ಫೋನ್‌ಗಾಗಿಯೂ ತಲಾಶ್ ಮುಂದುವರೆದಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ನನ್ನ ಬಳಿ ಮೊಬೈಲ್ ಇಲ್ಲ, ಕಾರ್ಯಕರ್ತರು, ಆಪ್ತ ಸಹಾಯಕ, ಚಾಲಕರ ಮೊಬೈಲ್ ಬಳಸುತ್ತಿದ್ದೆ ಎಂದು ಪ್ರಜ್ವಲ್ ತಮ್ಮ ಮಾತಿನ ವರಸೆಯನ್ನೇ ಬದಲಾಯಿಸಿದ್ದಾರೆ.

ತನಿಖೆ ವೇಳೆ ಮೊಬೈಲ್ ಮತ್ತು ಗ್ಯಾಜೆಟ್​​ಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಪ್ರಜ್ವಲ್ ತನಿಖಾಧಿಕಾರಿಗಳನ್ನು ಸತಾಯಿಸುತ್ತಿದ್ದಾರೆ. ಈ ಹಿಂದೆ ಬಳಸುತ್ತಿದ್ದ ಮೊಬೈಲ್ ಬಗ್ಗೆ ಎಸ್ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದು, ಈ ವೇಳೆ ತನ್ನ ಬಳಿ ಯಾವುದೇ ಸ್ವಂತ ಮೊಬೈಲ್ ಇಲ್ಲ, ಸಿಮ್ ಕಾರ್ಡ್ ಇಲ್ಲ. ಕಾರ್ಯಕರ್ತರು ಆಪ್ತ ಸಹಾಯಕ, ಚಾಲಕರು ಮೊಬೈಲ್ ಬಳಸುತ್ತಿದ್ದೆ‌ ಎಂದು ಪ್ರಜ್ವಲ್ ಉತ್ತರಿಸಿದ್ದಾರೆ.

ಪ್ರಜ್ವಲ್ ಈ ಹಿಂದೆ ತಮ್ಮ ಗೆಳತಿಗೆ ಮೊಬೈಲ್ ಹಾಗೂ ಕೆಲ ಎಲೆಕ್ಟ್ರಾನಿಕ್ ಗ್ಯಾಜೆಟ್​​ಗಳನ್ನು ಕೊಡಿಸಿರುವುದು ತನಿಖೆ ವೇಳೆ ತಿಳಿದಿದೆ. ಹೀಗಾಗಿ ಪ್ರಜ್ವಲ್ ಗೆಳತಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಸಿನಿಮೀಯ ರೀತಿ ಗ್ಯಾಂಗ್ ವಾರ್ : FIR ದಾಖಲು..!

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here