ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ​ ಸಿಲಿಂಡರ್ ಸ್ಫೋಟ – ಮೂರು ಮನೆಗಳು ಛಿದ್ರ ಛಿದ್ರ.. 7 ಮಂದಿಗೆ ಗಂಭೀರ ಗಾಯ!

ಬೆಂಗಳೂರು : ನಗರದ ವಿಲ್ಸನ್ ಗಾರ್ಡನ್​ ಬಳಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್​ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮೂರು ಮನೆಗಳು ಛಿದ್ರ, ಛಿದ್ರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಸಿಲಿಂಡರ್​ ಸ್ಫೋಟದ ಸದ್ದಿಗೆ ವಿಲ್ಸನ್ ಗಾರ್ಡನ್ ಜನರು ಬೆಚ್ಚಿಬಿದ್ದಿದ್ದಾರೆ. ಮೂರು ಮನೆಗಳ ಮೇಲಿನ ಶೀಟ್​ಗಳು ಹಾರಿದ್ದು, ಗೋಡೆಗಳು ಛಿದ್ರ, ಛಿದ್ರವಾಗಿದೆ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಸಖತ್ ಸಸ್ಪೆನ್ಸ್ ಥ್ರಿಲ್ಲರ್ ‘ಶೋಧ’ ವೆಬ್‌ ಸೀರೀಸ್ ಟ್ರೇಲರ್ ರಿಲೀಸ್.. ಆಗಸ್ಟ್ 22ರಿಂದ zee5ನಲ್ಲಿ ಸ್ಟ್ರೀಮಿಂಗ್!

 

Btv Kannada
Author: Btv Kannada

Read More