ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಕಾರು ಅಪಘಾತ.. ಪ್ರಾಣಾಪಾಯದಿಂದ ಪಾರಾದ ನಟ!

ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಐಷಾರಾಮಿಗೆ ಕಾರು ಅಪಘಾತಕ್ಕೀಡಾಗಿದೆ. ವಿಷ್ಣುಪ್ರಿಯ ಸಿನಿಮಾ ಪ್ರಮೋಷನ್‌ಗಾಗಿ ಶ್ರೇಯಸ್ ಮಂಜು ದಾವಣಗೆರೆಗೆ ತೆರಳುತ್ತಿದ್ದ ವೇಳೆ ಈ ಆ್ಯಕ್ಸಿಡೆಂಟ್ ಸಂಭವಿಸಿದೆ.

ನಾಳೆ ರಾಜ್ಯಾದ್ಯಂತ ಬಿಡುಗಡೆ ಸಜ್ಜಾಗಿರುವ ‘ವಿಷ್ಣುಪ್ರಿಯಾ’ ಸಿನಿಮಾ ಪ್ರಮೋಷನ್‌ಗಾಗಿ ಬೆಂಂಗಳೂರಿನಿಂದ ದಾವಣಗೆರೆಗೆ ಕಾರಿನಲ್ಲಿ ಶ್ರೇಯಸ್ ತೆರಳುತ್ತಿದ್ದರು. ಈ ವೇಳೆ ಶಿರಾ ಬಳಿ ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಓವರ್‌ ಟೇಕ್ ಮಾಡಲು ಬಂದ ಲಾರಿ ಶ್ರೇಯಸ್ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಲಾರಿ ಡಿಕ್ಕಿಯಾದ ಪರಿಣಾಮ ಶ್ರೇಯಸ್ BMW ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಶ್ರೇಯಸ್ ಮಂಜು ಸ್ಥಳದಲ್ಲೇ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

​​ಈಗಾಗಲೇ ಟ್ರೇಲರ್​ ಹಾಗೂ ಸಾಂಗ್​ಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ರಂಗೇರಿಸಿರೋ ‘ವಿಷ್ಣುಪ್ರಿಯಾ’ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಮೂಲಕ ಶ್ರೇಯಸ್​ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 90s ಲವ್​ ಸ್ಟೋರಿ ಇರೋ ಈ ಸಿನಿಮಾದಲ್ಲಿ ಶ್ರೇಯಸ್​​ ಜೊತೆ ಟಾಲಿವುಡ್​ ಬೆಡಗಿ ಪ್ರಿಯಾ ವಾರಿಯರ್​ ಸ್ಕ್ರೀನ್​ ಶೇರ್​ ಮಾಡಿದ್ದಾರೆ. ಪ್ರಕಾಶ್​ ಆ್ಯಕ್ಷನ್​ ಕಟ್​ ಹೇಳಿರೋ ಈ ಸಿನಿಮಾವನ್ನು ಕೆ.ಮಂಜು ಅವರು ನಿರ್ಮಾಣ ಮಾಡಿದ್ದಾರೆ.

Btv Kannada
Author: Btv Kannada

Leave a Comment

Read More