ಚಿಕ್ಕಮಗಳೂರಲ್ಲಿ ಪ್ರೇಮಿಗಳ ದುರಂತ ಅಂತ್ಯ – ಕಾರಲ್ಲಿ ಯುವತಿ ಶವ, ಮರದಲ್ಲಿ ಯುವಕ ನೇಣಿಗೆ ಶರಣು!

ಚಿಕ್ಕಮಗಳೂರು : ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವಗಳು ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ.

ಕಾರಿನಲ್ಲಿ ಯುವತಿಯ ಮೃತದೇಹ ಬಿದ್ದಿದ್ದರೆ, ಪಕ್ಕದ ಮರದಲ್ಲಿ ಯುವಕನ ದೇಹ ಪತ್ತೆಯಾಗಿದೆ. ಯುವತಿಯನ್ನ ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಬೆಂಗಳೂರು ನೋಂದಣಿಯ ಯೆಲ್ಲೋ ಬೋರ್ಡ್ ಕಾರಿನಲ್ಲಿ ಇಬ್ಬರು ಬಂದಿದ್ದಾರೆ.

KA 03 AD4628 ನೋಂದಣಿಯ ಕಾರಲ್ಲಿ ಲವ್ವರ್ಸ್ ಬಂದಿದ್ದು, ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ. ಯುವತಿಯ ವೇಲ್​ನಿಂದ ಪಕ್ಕದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಹೀಗಾಗಿ ಪ್ರಕರಣದ ಸುತ್ತ ಅನುಮಾನಗಳು ಶುರುವಾಗಿವೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Btv Kannada
Author: Btv Kannada

Leave a Comment

Read More