ಆನೇಕಲ್ : ಬೆಳ್ಳಂಬೆಳಗ್ಗೆ ರೌಡಿ ಶೀಟರ್​ಗಳ ಮನೆ ಮೇಲೆ ಪೊಲೀಸರ ದಾಳಿ.. 6 ಮಂದಿ ವಶಕ್ಕೆ!

ಆನೇಕಲ್ : ಬೆಳ್ಳಂಬೆಳಗ್ಗೆ ರೌಡಿ ಶೀಟರ್​ಗಳ ಮನೆ ಮೇಲೆ ಜಿಗಣಿ ಪೊಲೀಸರು ದಾಳಿ ಮಾಡಿದ್ದು, ರೌಡಿಶೀಟರ್​ಗಳಿಗೆ ನಡುಕ ಹುಟ್ಟಿಸಿದ್ದಾರೆ.

ಆನೇಕಲ್ ಉಪವಿಭಾದ ಜಿಗಣಿ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ಗಳ ಮನೆಯಲ್ಲಿ ಪೊಲೀಸರು ತಲಾಶ್ ನಡೆಸಿದ್ದಾರೆ.

ಕೆಲವು ರೌಡಿ ಶೀಟರ್​ಗಳ ಮನೆಗಳಲ್ಲಿ ಮಾರಕಸ್ತ್ರಾಗಳು ಪತ್ತೆಯಾಗಿದ್ದು, ಆರು ಮಂದಿ ರೌಡಿಶೀಟರ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೌಡಿ ಶೀಟರ್​ಗಳನ್ನು ಠಾಣೆಗೆ ಕರೆತಂದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಈ ವೇಳೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಜಿಗಣಿ ಇನ್ಸ್​​ಪೆಕ್ಟರ್ ಮಂಜುನಾಥ್ ರೌಡಿಶೀಟರ್​ಗಳ ಬೆವರಿಳಿಸಿದ್ದಾರೆ.

ಇದನ್ನೂ ಓದಿ : http://ಮಾಜಿ ಸಂಸದ ಎಲ್​.ಆರ್ ಶಿವರಾಮೇಗೌಡ ಇಂದು ಅಧಿಕೃತವಾಗಿ‌ ಕಾಂಗ್ರೆಸ್​ಗೆ ಸೇರ್ಪಡೆ!

Btv Kannada
Author: Btv Kannada

Leave a Comment

Read More