ಧನಂಜಯ್​-ಧನ್ಯತಾ ಅದ್ಧೂರಿ ರಿಸೆಪ್ಷನ್​.. ಡಾಲಿಗೆ ವಿಶ್ ಮಾಡಿದ ಪುಷ್ಪ 2 ಸಿನಿಮಾ ಡೈರೆಕ್ಟರ್​!

ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ರಿಸೆಪ್ಷನ್ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಅರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಕೋರಿದ್ದಾರೆ.

ಸ್ಯಾಂಡಲ್‌ವುಡ್‌ ತಾರೆಯರಾದ ಸಪ್ತಮಿ ಗೌಡ, ಅಜಯ್ ರಾವ್, ನೀನಾಸಂ ಸತೀಶ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಬೈಟ್, ಅವಿನಾಶ್, ಮಾಳವಿಕ ಅವಿನಾಶ್, ನಟ ಉಪೇಂದ್ರ, ಅರುಣ್‌ ಸಾಗರ್‌, ಶ್ರೀಮುರಳಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಧ್ರುವ ಸರ್ಜಾ, ಶ್ರದ್ಧಾ ಶ್ರೀನಾಥ್‌, ಶೃತಿ ಹರಿಹರನ್‌, ನಿಧಿ ಸುಬ್ಬಯ್ಯ ಆಗಮಿಸಿದ್ದಾರೆ. ಅಲ್ಲದೇ ರಾಜಕೀಯ ಗಣ್ಯರ ಪೈಕಿ ಸಚಿವ ಜಮೀರ್‌ ಅಹ್ಮದ್‌, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಶಾಸಕ ಶಿವಲಿಂಗೇಗೌಡ, ಸಚಿವ ಜಮೀರ್ ಅಹ್ಮದ್, ಕೇಂದ್ರ ಸಚಿವ ವಿ. ಸೋಮಣ್ಣ ಶಾಸಕ ಪ್ರದೀಪ್ ಈಶ್ವರ್, ಬಿ.ವೈ ವಿಜಯೇಂದ್ರ, ಸಂಸದ ಯದುವೀರ್ ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗೆ ಶುಭಹಾರೈಸಿದ್ದಾರೆ.

ಪುಷ್ಪ 2 ಸಿನಿಮಾ ಡೈರೆಕ್ಟರ್​ ಸುಕುಮಾರ್ ಕೂಡ ಡಾಲಿ ಧನಂಜಯ್ ರಿಸೆಪ್ಷನ್​ಗೆ ಆಗಮಿಸಿದ್ರು. ನವ ಜೋಡಿಗೆ ಟಾಲಿವುಡ್ ಡೈರೆಕ್ಟರ್ ಶುಭಕೋರಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಗೆ ಡಾಲಿ ಮದುವೆಯ ಶಾಸ್ತ್ರಗಳು ಆರಂಭವಾಗಿದ್ದು, ಬೆಳಗ್ಗೆ 8.10 ರಿಂದ 9.50 ಶುಭ  ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನಡೆಯಲಿದೆ.

Btv Kannada
Author: Btv Kannada

Leave a Comment

Read More

Read More