ದ್ವೀಪರಾಷ್ಟ್ರ ತೈವಾನ್ ಮತ್ತು ಫಿಲಿಪೈನ್ಸ್ ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಅಲ್ಲಿನ ಸ್ಥಳೀಯ ಕಾಲಮಾನ 8 ಗಂಟೆಗೆ ಪೂರ್ವ ತೈವಾನ್‌ನಲ್ಲಿ 7.5 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪನದ ಹಿನ್ನೆಲೆಯಲ್ಲಿ ಪೂರ್ವ ತೈವಾನ್ ಹಾಗೂ ಜಪಾನ್ ದಕ್ಷಿಣ ಭಾಗದಲ್ಲಿ ಸುನಾಮಿ ಅಲರ್ಟ್ ಘೋಷಿಸಲಾಗಿದೆ. ಸದ್ಯ ಭೂಕಂಪನದ ತೀವ್ರತೆಗೆ ಕಟ್ಟಡಗಳು ನೆಲಸಮವಾಗಿದೆ. ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಕಳೆದ 25 ವರ್ಷಗಳಲ್ಲೇ ಅತೀ ತೀವ್ರ ಪ್ರಮಾಣದ ಭೂಕಂಪನ ಇದಾಗಿದೆ ಎನ್ನಲಾಗ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ. ಪೂರ್ವ ತೈವಾನ್‌ನಲ್ಲಿ ಹಲವಾರು ಕಟ್ಟಡಗಳು ಕುಸಿದಿದ್ದು, ಬಹುಮಹಡಿ ಕಟ್ಟಡಗಳೇ ಧರೆಗೆ ಉರುಳಿ ಬೀಳುತ್ತಿದೆ.
ಭೂಕಂಪನದಿಂದಾಗಿ ಜಪಾನ್, ಚೀನಾದಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಜಪಾನ್ ಸಾಗರ ತೀರದ ಜನರಿಗೆ ಸುನಾಮಿ ಅಲರ್ಟ್ ಮಾಡಲಾಗಿದೆ. ಈವರಗೆ ಥೈವಾನ್ನಲ್ಲಿ 1 ಲಕ್ಷಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು, ಸುಮಾರು 3 ಮೀಟರ್ ಎತ್ತರದ ಅಲೆಗಳು ಏಳುವ ಅಲರ್ಟ್ ಮಾಡಲಾಗಿದೆ.
ಇದನ್ನೂ ಓದಿ : ಅಮಿತ್ ಶಾ ಸುಳ್ಳುಗಳ ಸರದಾರ : ಸಾಕ್ಷಿ ಸಮೇತ ತಿರುಗೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ..!