Download Our App

Follow us

Home » ಮೆಟ್ರೋ » ಆರ್​​ಸಿಬಿ-ಸಿಎಸ್​​ಕೆ ಮ್ಯಾಚ್ ಟಿಕೆಟ್​ ಆಸೆಗೆ ಬಿದ್ದು 3 ಲಕ್ಷ ಕಳ್ಕೊಂಡ ಯುವಕ..!

ಆರ್​​ಸಿಬಿ-ಸಿಎಸ್​​ಕೆ ಮ್ಯಾಚ್ ಟಿಕೆಟ್​ ಆಸೆಗೆ ಬಿದ್ದು 3 ಲಕ್ಷ ಕಳ್ಕೊಂಡ ಯುವಕ..!

ಬೆಂಗಳೂರು : RCB, CSK ಅಭಿಮಾನಿಗಳೇ ಹುಷಾರ್​​, ಹೈವೋಲ್ಟೇಜ್​ ಫೈಟ್​ ನೋಡೋ ಜೋಶ್​ನಲ್ಲಿ ಯಾಮಾರ್ಬೇಡಿ. ಆನ್​​​ಲೈನ್​​ನಲ್ಲಿ ಮ್ಯಾಚ್ ಟಿಕೆಟ್ ಖರೀದಿಸುವಾಗ ಎಚ್ಚರವಾಗಿರಿ. ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ CSK vs RCB ಮ್ಯಾಚ್ ಟಿಕೆಟ್​ ಆಸೆಗೆ ಬಿದ್ದು 3 ಲಕ್ಷ ಕಳ್ಕೊಂಡಿದ್ದಾನೆ.

ಇನ್​​ಸ್ಟಾಗ್ರಾಂನಲ್ಲಿ ಹಾಕಿದ್ದ ನಕಲಿ ವೆಬ್​ಸೈಟ್​ನಿಂದ​ ಟಿಕೆಟ್​ ಖರೀದಿಸಲು ಹೋಗಿ ವ್ಯಕ್ತಿ ಹಣ ಕಳೆದುಕೊಂಡಿದ್ದಾನೆ. ipl_ 2024 tickets RCB vs CSK ಎಂದು ಲಿಂಕ್ ಪೋಸ್ಟ್ ಮಾಡಿ, ಟಿಕೆಟ್​ಗಾಗಿ ಕರೆ ಮಾಡಿ ಎಂದು ಸೈಬರ್ ಕಳ್ಖರು ನಂಬರ್ ಹಾಕಿದ್ದರು. ಯುವಕನೊಬ್ಬ 2,300 ರೂ.ಗಳ 3 ಟಿಕೆಟ್​ ಖರೀದಿ ಮಾಡಿದ್ದ. ಹಣ ಪಾವತಿ ನಂತ್ರ ಈ-ಟಿಕೆಟ್ ಕಳಿಸೋದಾಗಿ ಸೈಬರ್ ಕಳ್ಳರು ಹೇಳಿದ್ದರು. ಬಳಿಕ ಮತ್ತೆ 67 ಸಾವಿರ, 30 ಸಾವಿರ ಕಳುಹಿಸಲು ಹೇಳಿದ್ರಂತೆ.

ವೆಬ್​ಸೈಟ್​ನಲ್ಲಿ ಹಾಕಿದ್ದ ನಂಬರ್​ಗೆ ಕರೆ ಮಾಡಿ ಯುವಕ ಮಾತ್ನಾಡಿದ್ದ. ಈ ವೇಳೆ 2 ದಿನದಲ್ಲಿ ಟಿಕೆಟ್ ಕಳಿಸೋದಾಗಿ ಹೇಳಿ ಮೊಬೈಲ್​ ಸ್ವಿಚ್​ ಆಫ್​ ಮಾಡಿದ್ರು. ಈ ಬಗ್ಗೆ ಕೇಂದ್ರ ವಿಭಾಗದ CEN ಠಾಣೆಗೆ ಯುವಕ ದೂರು ನೀಡಿದ್ದಾನೆ.

ಇದನ್ನೂ ಓದಿ : ರಾಖಿ ಸಾವಂತ್​ಗೆ ಕ್ಯಾನ್ಸರ್ ? ಮಾಜಿ ಪತಿ ಬಾಯ್ಬಿಟ್ರು ಅಸಲಿ ಸತ್ಯ..!

Leave a Comment

RELATED LATEST NEWS

Top Headlines

Live Cricket

Add Your Heading Text Here