ಬೆಂಗಳೂರು : ಖ್ಯಾತ ವಕೀಲರು ಹಾಗೂ ಹಾಲಿ ವಿಶೇಷ ಪಬ್ಲಿಕ್ ಕ್ಲಾಸಿಕ್ಯೂಟರ್ ಆಗಿದ್ದ ಬಿ.ಎನ್ ಜಗದೀಶ್ ಅವರನ್ನು ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಿ.ಎನ್. ಜಗದೀಶ್ ಅವರ ಕಾನೂನು ಪಾಂಡಿತ್ಯ ಮತ್ತು ದಕ್ಷತೆಯನ್ನು ಪರಿಗಣಿಸಿ ಸರ್ಕಾರ ಅವರನ್ನು ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರನ್ನಾಗಿ ನೇಮಕ ಮಾಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಬಿ.ಎನ್. ಜಗದೀಶ್ ಅವರನ್ನು ಉನ್ನತ ಜವಾಬ್ದಾರಿಯ ಈ ಹುದ್ದೆಗೆ ನಿಯೋಜಿಸಲಾಗಿದೆ.

ಬಿ.ಎನ್. ಜಗದೀಶ್ ಅವರು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ (SIT) ಪರ ವಾದಿಸುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಬಿ.ಎನ್ ಜಗದೀಶ್ ಅವರನ್ನು ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರನ್ನಾಗಿ ನೇಮಿಸಿದೆ.

ಇದನ್ನೂ ಓದಿ : ಪರಿಹಾರ ನೀಡದ್ದಕ್ಕೆ ಆಕ್ರೋಶ – ಪ್ರಾಧಿಕಾರದ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ರೈತ!
Author: Btv Kannada
Post Views: 358









