ಬೆಂಗಳೂರು : ಚೀಟಿ ಹಾಗೂ ಬಡ್ಡಿ ವ್ಯವಹಾರ ಮಾಡ್ತಿದ್ದ ಖತರ್ನಾಕ್ ಲೇಡಿ ಮತ್ತು ಆಕೆಯ ಮಗನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೌರಮ್ಮ ಹಾಗೂ ಆಕೆಯ ಮಗ ಹೇಮಂತ ಬಂಧಿತ ಆರೋಪಿಗಳು.

ಕುರುಬರಹಳ್ಳಿ ಮುಖ್ಯರಸ್ತೆಯಲ್ಲಿರುವ ಇವರ ಮಾಲೀಕತ್ವದ ರಂಗ ಎಂಟರ್ ಪ್ರೈಸಸ್ ಶಾಪ್ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಗೌರಮ್ಮ ಚೀಟಿ ವ್ಯವಹಾರ ಅಂತ ಹೇಳಿ ಮಕ್ಮಲ್ ಟೋಪಿ ಹಾಕ್ತಿದ್ದಳು.

ಈ ಹಿಂದೆ ಗೌರಮ್ಮನ ಮೇಲೆ ಮಹಾಲಕ್ಷ್ಮಿ ಲೇಔಟ್ ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ವೇಶ್ಯಾವಾಟಿಕೆ ಕೇಸ್ನಲ್ಲಿ ಗೌರಮ್ಮ ಎರಡೆರೆಡು ಬಾರಿ ಜೈಲು ಸೇರಿದ್ದಳು. ಜೈಲಿಂದ ಹೊರಬಂದವ್ಳೆ ಚೀಟಿ ಹಾಗೂ ಬಡ್ಡಿ ವ್ಯವಹಾರ ಶುರುಮಾಡಿದ್ದಳು.

ಗೌರಮ್ಮ ಚೀಟಿ ಹೆಸರಲ್ಲಿ ಹತ್ತಾರು ಜನರಿಗೆ ವಂಚಿಸಿದ್ದು, ನೊಂದ ಹತ್ತಾರು ಸಂತ್ರಸ್ತರು ಇತ್ತೀಚೆಗೆ ಸಹಕಾರಿ ಇಲಾಖೆಗೆ ದೂರು ನೀಡಿದ್ದರು. ದೂರಿನನ್ವಯ ಸಹಕಾರಿ ಇಲಾಖೆಯ ಅಧಿಕಾರಿಗಳು ಸಿಸಿಬಿ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದು ವಿಲವಿಲ ಒದ್ದಾಡುತ್ತಿರುವ ಗೌರಮ್ಮ ಆ್ಯಂಡ್ ಟೀಂ ಅನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.


ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿಯಾದ ಡಿಕೆಶಿ – ಪಿಎಂಗೆ 18 ಬೇಡಿಕೆಗಳ ಅಹವಾಲು ಸಲ್ಲಿಸಿದ ಸಿಎಂ!









