ಜೈಶ್ ನಿರ್ದೇಶನದ ‘ಲವ್ ಕೇಸ್’ ಶೂಟಿಂಗ್ ಕಂಪ್ಲೀಟ್!

ಲವ್ ಕೇಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಜೈಶ್ ನಿರ್ದೇಶನದ ಈ ಚಿತ್ರವನ್ನ ಎಂ.ಬಿ ಕ್ರಿಯೇಷನ್ಸ್ ಮೋಹನ್ ಬಾಬು ನಿರ್ಮಾಣ ಮಾಡ್ತಿದ್ದಾರೆ. ಸೆಟ್ಟೇರಿದಾಗ್ಲೇ ದೊಡ್ಡದಾಗಿ ಸುದ್ದಿಯಾಗಿದ್ದ ಈ ಚಿತ್ರದ ಕೊನೆಯ ದಿನದ ಚಿತ್ರೀಕರಣ ನಾಗರಭಾವಿಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮುಕ್ತಾಗೊಂಡಿದ್ದು, ಚಿತ್ರತಂಡ ಕುಂಬಳಕಾಯಿ ಹೊಡೆದು ಚಿತ್ರೀಕರಣಕ್ಕೆ ಶುಭಂ ಹಾಡಿದೆ.

ಶ್ರೀನಗರ ಕಿಟ್ಟಿ, ಪ್ರಮೋದ್ ಶೆಟ್ಟಿ, ಸುಧಾರಾಣಿ ನಾಗಭೋಷಣ್, ಮಹಾನಟಿ ಖ್ಯಾತಿಯ ವಂಶಿ, ಸ.ಹಿ.ಪ್ರಾ. ಶಾಲೆ ಕಾಸರಗೋಡು ಹಾಗೂ ಕಾಂತಾರ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಆದಿ ಹರಿಕೃಷ್ಣ ಸಂಗೀತ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಅನುಕೃಷ್ಣ ಸಂಕಲನ‌ವಿರೋ ಈ ಚಿತ್ರದ ಹಲವು ವಿಶೇಷ ವಿಚಾರಗಳಿಂದ ಕೂಡಿದ್ದು, ಚಿತ್ರತಂಡ ಅತೀ ಶೀಘ್ರದಲ್ಲೇ ತೆರೆಗೆ ತರೋ ಸನ್ನಾಹದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದ್ದು, ಸದ್ಯದಲ್ಲೇ ಟೀಸರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡೋ ಆಲೋಚನೆಯಲ್ಲಿದೆ.

ಇದನ್ನೂ ಓದಿ : “ಊರಬ್ಬ”ದಲ್ಲಿ ಜಾತ್ರೆಯ ನೈಜದೃಶ್ಯ ಶಾಸಕ ರಂಗನಾಥ್​ರಿಂದ ಟ್ರೈಲರ್ ರಿಲೀಸ್!

Btv Kannada
Author: Btv Kannada

Leave a Comment