ಇಂದಿನಿಂದ 23ನೇ ಆವೃತ್ತಿಯ FIFA ವಿಶ್ವಕಪ್ ಟೂರ್ನಿ ಆರಂಭ!

ವಿಶ್ವದ ಅತ್ಯಂತ ದೊಡ್ಡ ಫುಟ್‌ಬಾಲ್ ಟೂರ್ನಮೆಂಟ್ ಫಿಫಾ ವಿಶ್ವಕಪ್ 2026 ಇಂದಿನಿಂದ ಆರಂಭವಾಗಲಿದೆ. ಮೂರು ರಾಷ್ಟ್ರಗಳಾದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಈ ಜಾಗತಿಕ ಫುಟ್‌ಬಾಲ್ ಹಬ್ಬವನ್ನು ಆಯೋಜಿಸುತ್ತಿವೆ.

ಮೆಕ್ಸಿಕೋ ಸಿಟಿಯ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಇಂದಿನ ಪಂದ್ಯ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ಸೌತ್ ಆಫ್ರಿಕಾ ಎದುರು ಕಣಕ್ಕಿಳಿಯಲಿದೆ.

ಈ ಬಾರಿ ದಾಖಲೆಯ 48 ರಾಷ್ಟ್ರಗಳು ಕಣಕ್ಕಿಳಿಯುತ್ತಿದ್ದು, ಇದರಿಂದ ಪಂದ್ಯಗಳ ರೋಮಾಂಚನ ದುಪ್ಪಟ್ಟಾಗಲಿದೆ. ಒಟ್ಟು 39 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಕಪ್‌ಗಾಗಿ 104 ಪಂದ್ಯಗಳು ಜರುಗಲಿವೆ. ಜು.19ರಂದು ನ್ಯೂಜೆರ್ಸಿಯಲ್ಲಿ ಹೈ-ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ : ಬರ್ತ್ ಡೇ ಬಾಯ್ ಕಾಡ ನಟರಾಜ್​ಗೆ ಡಬಲ್ ಖುಷಿ!

Btv Kannada
Author: Btv Kannada

Leave a Comment