“ದೊಡ್ಮನ್ಸ” ಚಿತ್ರದ ಪವರ್ ಪ್ಯಾಕ್ಡ್ ಟ್ರೇಲರ್ ರಿಲೀಸ್!

ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ, ಶರತ್ ಕೃಷ್ಣ ನಿರ್ದೇಶನದಲ್ಲಿ ಶರತ್ ಕೃಷ್ಣ ಮತ್ತು ರೇಷ್ಮಾ, ಶಿಲ್ಪಾ ಮುಖ್ಯ ಪಾತ್ರದಲ್ಲಿ ನಟಿಸಿರುವ “ದೊಡ್ಮನ್ಸ” ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ ಅನ್ನೋದನ್ನ ಈ ಟ್ರೇಲರ್ ತೋರಿಸಿಕೊಟ್ಟಿದೆ. ಹೀರೋ ಮಾಸ್ ಅವತಾರ, ಫೈಟ್ ಸೀನ್​ಗಳು ಟ್ರೇಲರ್​ನಲ್ಲಿಯೇ ಮಾಸ್ ಪ್ರಿಯರ ಗಮನ ಸೆಳೆದಿದೆ. ಇನ್ನು ಒಂದು ಇನ್ನೊಸೆಂಟ್ ಲವ್ ಕೂಡ ಅನಾವರಣವಾಗಿದೆ. ಸಿನಿಮಾ ಬಗ್ಗೆ ಒಂದೊಳ್ಳೆ ಭರವಸೆಯನ್ನ ಈ ಟ್ರೇಲರ್ ಮೂಡಿಸಿದೆ.

ನಟ, ನಿರ್ದೇಶಕ ಶರತ್ ಕೃಷ್ಣ ಅವರು, ದೊಡ್ಮನ್ಸ ಎಲ್ಲಿ ಆರಂಭ ಮಾಡಿ, ಇಲ್ಲಿ ನಿಂತಿದ್ದೀವಿ. ಈ ಹಿಂದೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಮಾತನ್ನ ಹೇಳ್ತಾ ಇದ್ದರು. ಈಗ ಲೋನ್ ಕೊಡೋಕೆ ಬೇಕಾದಷ್ಟು ಬ್ಯಾಂಕ್ ಗಳಿದಾವೆ. ಆದರೆ ಆಕ್ಟಿಂಗ್ ಮಾಡಬೇಕು ಅಂತ ಹೊರಟಾಗ ಎಷ್ಟೆಲ್ಲಾ ಸ್ಟ್ರಗಲ್ ಮಾಡಬೇಕು ಅನ್ನೋದು ಅನುಭವಿಸಿದ್ದೀನಿ. ನನ್ನೀಡಿ ಫ್ಯಾಮಿಲಿ ನನಗೆ ಬೆಂಬಲ ನೀಡಿದೆ. ನಂಗೆ ಇನ್ನೊಬ್ಬರು ಫ್ರೆಂಡ್ ಬ್ಯಾಕ್ ಬೋನ್ ಆಗಿ ನಿಂತಿದ್ದಾರೆ. ಅದಕ್ಕೆ ನಾನು ಋಣಿ. ಬಾಬಾ ಏನು ಶಕ್ತಿ ಕೊಟ್ಟಿದ್ದಾರೆ ಅದರ ಮೇಲೆ ಹೋಗ್ತಾ ಇದ್ದೀನಿ. ದೊಡ್ಮನ್ಸ ಒಂದು ಮಾರ್ಕ್ ಮಾಡಿನೆ ಮುಂದೆ ಸಾಗುತ್ತೆ. ಒನ್ ಮ್ಯಾನ್ ಆರ್ಮಿ ಥರ ಕೆಲಸ ಮಾಡಿದ್ದೀನಿ ಎಂದಿದ್ದಾರೆ.

ಸಿನಿಮಾದಲ್ಲಿ ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ನಟಿಸಿದ್ದಾರೆ. ಇದೇ ತಿಂಗಳ 19 ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ.

ಇದನ್ನೂ ಓದಿ : “ಬಾಯ್ಸ್ ನೆವರ್ ಕಾಂಪ್ರಮೈಸ್” ಟೀಸರ್, ಬಾಯ್ಸ್ ಆಂಥೆಮ್ ಬಿಡುಗಡೆ!

Btv Kannada
Author: Btv Kannada

Leave a Comment

Read More

Read More