ವಿಶಾಖಪಟ್ಟಣದ ಉಕ್ಕು ಸ್ಥಾವರದಲ್ಲಿ ಭೀಕರ ದುರಂತ – 8 ಕಾರ್ಮಿಕರು ಸಾವು!

ವಿಶಾಖಪಟ್ಟಣ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಉಕ್ಕು ಸ್ಥಾವರದಲ್ಲಿ ಭೀಕರ ದುರಂತ ಸಂಭವಿಸಿದೆ. ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ ಸ್ಫೋಟಗೊಂಡ ಪರಿಣಾಮ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. 

ಈ ದುರಂತ ಕಂಟಿನ್ಯೂಯಸ್ ಕ್ಯಾಸ್ಟಿಂಗ್ ಯಂತ್ರದ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದಿದ್ದು, ಇಪ್ಪತ್ತೆರಡು ಲ್ಯಾಡಲ್‌ಗಳ ಕಾರ್ಯಾಚರಣೆ ಮುಗಿದ ನಂತರ, ಮುಂದಿನ ಲ್ಯಾಡಲ್ ಅನ್ನು ಸೇರಿಸುವಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಸಮಯದಲ್ಲಿ, ಲ್ಯಾಡಲ್‌ನ ಮೇಲ್ಭಾಗದಿಂದ ಹಠಾತ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಿಸಿ ಲೋಹ ಚೆಲ್ಲಿದೆ ಮತ್ತು ಕ್ರೇನ್‌ಗೂ ಹಾನಿಯಾಗಿದೆ.

ಘಟನೆಯಲ್ಲಿ ಹಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕನಿಷ್ಠ ಆರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ನನ್ನ ಜೀವನ ನಡೆಸಲು ಯಾರನ್ನಾದ್ರೂ ಕೇಳಬೇಕಾ? – ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ!

Btv Kannada
Author: Btv Kannada

Leave a Comment

Read More