ಮಂಗಳೂರು : ಮಂಗಳೂರಿನ ಪ್ರಸಿದ್ಧ ಉದ್ಯಮಿಯನ್ನು ಕಾಂಗ್ರೆಸ್ ನಾಯಕರಿಬ್ಬರು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಕೋಟಿ ಕೋಟಿ ಹಣ ದೋಚಿರುವ ಆರೋಪ ಕೇಳಿಬಂದಿದೆ. ಮಂಗಳೂರು ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಜಿತೇಶ್ ಎಂಬುವವರು ಅಶ್ಲೀಲ ವಿಡಿಯೋ ಬಳಸಿ ಬ್ಲ್ಯಾಕ್ಮೇಲ್ ಮಾಡಿದ್ದು, ಉದ್ಯಮಿಯಿಂದ ಬರೋಬ್ಬರಿ 2 ಕೋಟಿ 77 ಲಕ್ಷ ದೋಚಿದ್ದಾರೆ.

ಇದೀಗ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಹಾಗೂ ಜಿತೇಶ್ ಎಂಬುವವರಿಂದ ಭಾರೀ ಹನಿಟ್ರ್ಯಾಪ್ ನಡೆದಿರೋದು ಬೆಳಕಿಗೆ ಬಂದಿದೆ.
2024ರಲ್ಲೇ ಪ್ರಸಿದ್ಧ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಜಿತೇಶ್, ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆಟ ಶುರು ಮಾಡಿದ್ದ. ಹಣ ಕೊಡದಿದ್ರೆ ಆತನ ಪತ್ನಿಗೆ ವಿಡಿಯೋ ತೋರಿಸೋದಾಗಿ ಜಿತೇಶ್ ಬೆದರಿಕೆ ಹಾಕಿದ್ದ. ಮೊದಲಿಗೆ ಜಿತೇಶ್ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್ಗೆ ಉದ್ಯಮಿ ಹಣ ನೀಡಿದ್ದ.

ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಯುವ ಕಾಂಗ್ರೆಸ್ ಮುಖಂಡ ನಿಝಾಮ್ಗೆ ಉದ್ಯಮಿ ಮಾಹಿತಿ ನೀಡಿದ್ದ. ಆದರೆ ಜಿತೇಶ್ ಜೊತೆ ಸೇರಿ ಕಾಂಗ್ರೆಸ್ ಮುಖಂಡ ನಿಝಾಮ್ ಉದ್ಯಮಿಗೆ ಬ್ಲಾಕ್ ಮೇಲ್ ಮಾಡಿಲು ಶುರು ಮಾಡಿದ್ದಾರೆ. ನಿಝಾಮ್ ಎಂಟ್ರಿಯಾಗಿ ಉದ್ಯಮಿಯಿಂದ ಮತ್ತೆ ಕೋಟಿ ಕೋಟಿ ಲೂಟಿ ಮಾಡಿದ್ದಾನೆ.
ಜಿತೇಶ್ ಆತ್ಮಹತ್ಯೆ ಕಥೆ ಕಟ್ಟಿ ಉದ್ಯಮಿ ಬಳಿ ನಿಝಾಮ್ ಇಬ್ರಾಹಿಂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಸದ್ಯ ಹನಿಟ್ರ್ಯಾಪ್ ಕೇಸ್ನಲ್ಲಿ ನಿಝಾಮ್ ಮತ್ತು ಜಿತೇಶ್ ಇಬ್ಬರನ್ನ ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಉದ್ಯಮಿ ಬ್ಲ್ಯಾಕ್ ಮೇಲ್ ಎಳೆದ ರೋಚಕ ಆತ್ಮಹತ್ಯೆ ಕಥೆ ಬಯಲಾಗಿದೆ.

2024ರ ಮೇ ತಿಂಗಳಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ನಿಝಾಮ್ ಉದ್ಯಮಿ ಬಳಿ ಸುಳ್ಳು ಹೇಳಿದ್ದ. ಡೆತ್ ನೋಟ್ ನಲ್ಲಿ ಉದ್ಯಮಿ ಹೆಸರು ಬರೆದಿರೋದಾಗಿ ಕಥೆ ಸೃಷ್ಟಿಸಿ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಜಿತೇಶ್ ನೇಣಿಗೆ ಶರಣಾದ ರೀತಿ ಹಾಗೂ ಅಂತ್ಯಕ್ರಿಯೆಯ ಫೋಟೋ ಹಾಕಿ ಉದ್ಯಮಿಗೆ ಬ್ಲ್ಯಾಕ್ ಮೇಲ್ ಮಾಡಿದ್ದು, ಜೀವಂತವಾಗಿದ್ದವನ ಆತ್ಮಹತ್ಯೆ ಕಥೆ ಸೃಷ್ಟಿಸಿ ಕೇಸು ಹಾಕಿಸಿ ಜೈಲಿಗೆ ತಳ್ಳುವ ಬೆದರಿಕೆ ಹಾಕಿದ್ರು. ಜೈಲಿಗೆ ಹೋಗೋದನ್ನ ತಪ್ಪಿಸಲು ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಜಿತೇಶ್ ಆತ್ಮಹತ್ಯೆ ಕಥೆ ಹಾಗೂ ಡೆತ್ ನೋಟ್ ಸ್ಟೋರಿ ನಂಬಿದ್ದ ಮಂಗಳೂರಿನ ಉದ್ಯಮಿ 2024 ರಿಂದ 2026ರವರೆಗೆ ಕೋಟ್ಯಾಂತರ ರೂಪಾಯಿ ಹಣ ಕೊಟ್ಟಿದ್ದಾನೆ. ಎರಡು ವರ್ಷಗಳಿಂ 2 ಕೋಟಿ 77 ಲಕ್ಷದಷ್ಟು ಹಣ ವಸೂಲಿ ಮಾಡಿದ್ದಾರೆ. ಆದ್ರೆ ಮಂಗಳೂರಿನಲ್ಲಿ 2026ರ ಜೂನ್ ನಲ್ಲಿ ಉದ್ಯಮಿಗೆ ಕಣ್ಣಿಗೆ ಜಿತೇಶ್ ಬಿದ್ದಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ಜೀವಂತ ಇರೋದು ನೋಡಿ ಉದ್ಯಮಿಯೇ ಶಾಕ್ ಆಗಿದ್ದಾನೆ.

ಹೀಗಾಗಿ ಈ ಸಂಬಂಧ ಉದ್ಯಮಿ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉದ್ಯಮಿ ದೂರಿನ ಆಧಾರದಲ್ಲಿ ಜಿತೇಶ್ ಜಾಗೂ ನಿಝಾಮ್ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ರಾಜ್ಯದ ಹಲವು ನಾಯಕರ ಜೊತೆಗಿನ ನಿಝಾಮ್ ಫೋಟೋ ಇದೀಗ ವೈರಲ್ ಆಗ್ತಿದೆ.
ಇದನ್ನೂ ಓದಿ : ಉಜ್ವಲ ಫಲಾನುಭವಿಗಳಿಗೆ ಶಾಕ್ – ಇನ್ಮುಂದೆ ವರ್ಷಕ್ಕೆ ನಾಲ್ಕೇ ಸಿಲಿಂಡರ್!









