‘ಗೀಕ್’ ಸಿನಿಮಾದ ಪೋಸ್ಟರ್ ರಿಲೀಸ್ – ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್!

ಟೈಟಲ್‌ನಿಂದಲೇ ಕುತೂಹಲ ಮೂಡಿಸಿದ್ದ ಗೀಕ್ (GEEK) ಚಿತ್ರದ ಮೊದಲ ಝಲಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಚಂದನವನದ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಕಾನ್ಸೆಪ್ಟ್ ಮೆಚ್ಚಿ ಟೈಟಲ್ ಟೀಸರ್ ಅನಾವರಣಗೊಳಿಸಿದ್ದರು. ಇದೀಗ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೀಕ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಚಿತ್ರತಂಡದ ಶ್ರಮ ಹಾಗೂ ಕ್ರಿಯೇಟಿವಿಟಿ ಮೆಚ್ಚಿ ಅವರು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್, ವಿರಾನಿಕಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಡಿ.ಹರಿ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದಲ್ಲಿ ಕಂಟೆಂಟ್ ಅಡಕವಾಗಿದೆ ಎಂಬುದು ಈವರೆಗೂ ಚಿತ್ರದ ಝಲಕ್ ನೋಡಿದವರ ಅಭಿಪ್ರಾಯ.

ಎಸ್.ವಿ.ಎಂ ಪ್ರೊಡಕ್ಷನ್ಸ್ ಹಾಗೂ ಹರಿಪ್ರಕಾಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ನಾಗರಾಜ್ ಹಾಗೂ ಪ್ರಿಯಾಂಕಾ ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರರಂಗದಲ್ಲಿ ಒಂದೊಳ್ಳೆ ಸಿನಿಮಾ ಕೊಡುವ ನಿಟ್ಟಿನಲ್ಲಿ ನಿರ್ಮಾಪಕದ್ವಯರು ಕಂಟೆಂಟ್ ಇರುವ ಸಿನಿಮಾವನ್ನೇ ನೀಡಬೇಕೆಂದು ಪ್ಯಾಶನ್‌ನೊಂದಿಗೆ ‘ಗೀಕ್’ಗೆ ಬಂಡವಾಳ ಹೂಡಿದ್ದಾರೆ ಸಂದೀಪ್ ನಾಗರಾಜ್ ಹಾಗೂ ಪ್ರಿಯಾಂಕಾ.

ಕೀರ್ತನ್ ಪೂಜಾರಿ ಛಾಯಾಗ್ರಹಣ, ಜೋ ಕೋಸ್ಟಾ ಸಂಗೀತ ಸಂಯೋಜನೆ, ಶಶಾಂಕ್ ನಾರಾಯಣ್ ಸಂಕಲನ, ಲಿಜು ಪ್ರಭಾಕರ್ ಡಿಐ ಹಾಗೂ ಅರುಣ್ ಸೌಂಡ್ ಡಿಸೈನಿಂಗ್ ಈ ಚಿತ್ರಕ್ಕಿದೆ. ಯೋಗೀಶ್ ರಾಜ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇತ್ತೀಚೆಗೆ ಮೊಬೈಲ್ ಸಂಬಂಧಿತ ಆಪ್‌ಗಳು ಹಾಗೂ ಡೇಟಾ ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಇದಕ್ಕೆ ಸಸ್ಪೆನ್ಸ್-ಥ್ರಿಲ್ಲರ್ ಅಂಶವನ್ನು ಸೇರಿಸಲಾಗಿದೆ. ಕಂಟೆಂಟ್ ಜತೆಗೆ ಸಸ್ಪೆನ್ಸ್, ಥ್ರಿಲ್ ನೀಡಬೇಕು ಎಂಬ ನಿಟ್ಟಿನಲ್ಲಿ ಈ ಸಿನಿಮಾ ತಯಾರಾಗಿದೆ. ಬಹುತೇಕ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಟೆಕ್ನಿಕಲಿ ಸೌಂಡ್ ಜೋರಾಗಿರಬೇಕು ಎಂಬ ಕಾರಣಕ್ಕೆ ನುರಿತ ತಂತ್ರಜ್ಞರೇ ಈ ಸಿನಿಮಾದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಬಿಟ್‌ಕಾಯಿನ್ ಹಗರಣ – ಮೊಹಮ್ಮದ್ ನಲಪಾಡ್ ವಿರುದ್ಧ SIT ಚಾರ್ಜ್‌ಶೀಟ್ ಸಲ್ಲಿಕೆ!

Btv Kannada
Author: Btv Kannada

Leave a Comment

Read More