ರಾಜ್ಯಸಭಾ ಚುನಾವಣೆ – ಪ್ರೊ ಎಂ.ನಾಗರಾಜ್​ಗೆ ಬಿಜೆಪಿ ಟಿಕೆಟ್ ಘೋಷಣೆ!

ಬೆಂಗಳೂರು : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಚುನಾವಣೆಗೆ ಕೊನೆಗೂ ಬಿಜೆಪಿ ಟಿಕೆಟ್​ ಘೋಷಣೆ ಮಾಡಿದೆ. ಪ್ರೊ ಎಂ.ನಾಗರಾಜ್​ ಅವರಿಗೆ ರಾಜ್ಯಸಭೆ ಟಿಕೆಟ್​ ನೀಡಲಾಗಿದೆ. ಹಾಗೆಯೇ, ವಿಧಾನಪರಿಷತ್​​ಗೆ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಲಿಂಗರಾಜ್ ಪಾಟೀಲ್​ ಹಾಗೂ ರಘು ಕೌಟಿಲ್ಯ ಅವರಿಗೆ ಬಿಜೆಪಿ ಹೈಕಮಾಂಡ್ ವಿಧಾನಪರಿಷತ್ ಟಿಕೆಟ್​ ನೀಡಿದೆ. ಹಲವು ದಿನಗಳ ಗೊಂದಲದ ಬಳಿಕ ಕೊನೆಗೂ ರಾಜ್ಯಸಭೆ ಹಾಗೂ ವಿಧಾನಪರಿಷತ್ ಅಭ್ಯರ್ಥಿಗಳ ಹೆಸರುಗಳು ಹೊರಬಿದ್ದಿವೆ.

ರಾಜ್ಯದಿಂದ ನಾಲ್ಕು ರಾಜ್ಯಸಭೆ ಸ್ಥಾನಗಳು ತೆರವಾಗಲಿವೆ. ಈ ಪೈಕಿ ಕಾಂಗ್ರೆಸ್ 3, ಬಿಜೆಪಿ 1 ಸ್ಥಾನ ಗೆಲ್ಲಲು ಅವಕಾಶ ಇದೆ. ಜೂನ್ 18ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಪ್ರೊ. ಎಂ. ನಾಗರಾಜ್ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡರು. ಮೂಲತಃ ಹುಬ್ಬಳ್ಳಿ-ಧಾರವಾಡದವರಾದ ನಾಗರಾಜ್, ಶೈಕ್ಷಣಿಕ ವಲಯದಿಂದ ಬಂದವರಾಗಿದ್ದು, ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

ಇದನ್ನೂ ಓದಿ :ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲೂ ರೌಡಿಗಳ ನಿಗ್ರಹ ದಳ ರಚನೆಗೆ ಆದೇಶ!

Btv Kannada
Author: Btv Kannada

Leave a Comment

Read More