ಅಪ್ಪನ‌ ಕುರಿತು ಚೆಂದದ ಹಾಡು ಬಿಡುಗಡೆ ಮಾಡಿದ ‘ಪ್ರೇಮದ ಊರಲ್ಲಿ’ ಚಿತ್ರತಂಡ!

ಕನ್ನಡ‌ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಆದ್ರೆ ಅಪ್ಪನ ಪ್ರೀತಿಯನ್ನು ಸಂಭ್ರಮಿಸುವ ಹೊಸ ಹಾಡು ಸಿನಿಮಾಪ್ರೇಮಿಗಳನ್ನು ಸೆಳೆಯುತ್ತಿದೆ. ಅದುವೇ ಅವ್ವನಂತ ಅಪ್ಪನಿವನು.‌

ಮ್ಯೂಸಿಕಲ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಪ್ರೇಮದ ಊರಲ್ಲಿ ಸಿನಿಮಾ ತಂಡವೀಗ ಅಪ್ಪನ ಕುರಿತಾದ ಚೆಂದದ ಹಾಡನ್ನು ಬಿಡುಗಡೆ ಮಾಡಿದೆ.

ನಿರ್ದೇಶಕ ಮನೋಜ್ ಕುಮಾರ್ ಕ್ಯಾಚಿ ಮ್ಯಾಚಿ ಪದ ಪೊಣಿಸಿ ಅಪ್ಪನ ಶ್ರಮವನ್ನು ವರ್ಣಿಸಿದ್ದಾರೆ. ಸಿದ್ದಾರ್ಥ್ ಸುಂದರ್ ಹಾಡಿಗೆ ಧ್ವನಿಯಾಗಿದ್ದು, ಸುನಾದ್ ಗೌತಮ್ ಸಂಗೀತ ಒದಗಿಸಿದ್ದಾರೆ.

ಅವ್ವನಂತ ಅಪ್ಪನಿವನು ಗೀತೆಯಲ್ಲಿ ಅಪ್ಪನಾಗಿ ರಂಗಾಯಣ ರಘು ಹಾಗೂ ಮಗನಾಗಿ ಶ್ರೀರಾಮ್ ನಟಿಸಿದ್ದಾರೆ. ರಂಗಾಯಣ ರಘು ಕೂಡ ಹಾಡಿಗೆ ಹೆಜ್ಜೆ ಹಾಕಿರುವುದು ಸ್ಪೆಷಲ್.

ಪ್ರೇಮದ ಊರಲ್ಲಿ ಸಿನಿಮಾದಲ್ಲಿ ಶ್ರೀರಾಮ್‌ ನಾಯಕನಾಗಿ ನಟಿಸಿದ್ದು, ನಟಿಯರಾದ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಜೊತೆಯಾಗಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಅಕ್ಷಿ’ ಸಿನಿಮಾ ನಿರ್ದೇಶಿಸಿದ್ದ ಮನೋಜ್‌ ಕುಮಾರ್‌ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ವೆನಿಲ್ಲಾ ಎಂಟರ್‌ಟೇನ್ಮೆಂಟ್‌, ಜಾನಕಮ್ಮ ಪ್ರೊಡಕ್ಷನ್‌ನಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ. ಸುನಾದ ಗೌತಮ್ ಸಂಗೀತ ನಿರ್ದೇಶನ, ರಾಜ್ಕಾಂತ್ ಎಸ್.ಕೆ. ಛಾಯಾಚಿತ್ರಗ್ರಹಣ, ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ : ಟ್ರೇಲರ್​ನಲ್ಲೇ ಕುತೂಹಲ ಮೂಡಿಸಿದ ‘ಬಾಲನ್ ದಿ ಬಾಯ್’ – ಜೂ.19ಕ್ಕೆ ಸಿನಿಮಾ ತೆರೆಗೆ!

Btv Kannada
Author: Btv Kannada

Leave a Comment

Read More

Read More