ಬೆಂಗಳೂರು : ಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಹೊಸದಾಗಿ ರೌಡಿ ನಿಗ್ರಹ ಪಡೆ ರಚನೆ ಮಾಡಿ ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.
ಪ್ರತಿ ಪೊಲೀಸ್ ವಲಯ ಮತ್ತು ಠಾಣೆ ಮಟ್ಟದಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ಗಳನ್ನು ರಚಿಸಲು ಆದೇಶಿಸಲಾಗಿದೆ. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ಪರಿಶೋಧಕ ಡಾ. ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಈ ಕ್ರಮಕೈಗೊಂಡಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಮೊದಲ ಪತ್ರಿಕಾಗೋಷ್ಠಿಯಲ್ಲಿ ರೌಡಿಗಳನ್ನ ಹಾಗೂ ರೌಡಿ ಚಟುವಟಿಕೆಯನ್ನ ಮಟ್ಟ ಹಾಕಲು ರೌಡಿ ನಿಗ್ರಹ ದಳವನ್ನ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆಯ ಮೇರೆಗೆ ರೌಡಿ ನಿಗ್ರಹ ಪಡೆಯನ್ನ ರಚಿಸಿ ಆದೇಶಿಸಲಾಗಿದೆ.
ಆದೇಶದಲ್ಲಿನ ಅಂಶಗಳು
- ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಅಥವಾ ಠಾಣಾ ಅಧಿಕಾರಿಗಳು ನಿಯಮಿತವಾಗಿ ರೌಡಿ ನಿಗ್ರಹ ದಳದ ಕಾರ್ಯಕ್ಷಮತೆ ಪರಿಶೀಲಿಸಬೇಕು.
- ಎಸ್‌ಡಿಪಿಒಗಳು ಮತ್ತು ಎಸಿಪಿಗಳು ಮಾಸಿಕ ಅಪರಾಧ ಸಭೆಗಳಲ್ಲಿ ರೌಡಿ ನಿಗ್ರಹ ದಳದ ಕಾರ್ಯಕ್ಷಮತೆ ವಿಮರ್ಶಿಸಬೇಕು.
- ರೌಡಿ ನಿಗ್ರಹ ದಳದ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್ ಇರಬೇಕು ಮತ್ತು ಮಾಸಿಕ ವರದಿಯನ್ನು ಡಿಓ ಪತ್ರದ ರೂಪದಲ್ಲಿ ಸಲ್ಲಿಸಬೇಕು.
- ಪೊಲೀಸ್ ಅಧಿಕಾರಿಗಳು ರೌಡಿಗಳು ಮತ್ತು ಅಸಾಮಾಜಿಕ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಬೇಕು.
- ಬೆದರಿಕೆ, ಬಲವಂತದಿಂದ ಹಣ ಸಂಗ್ರಹಣೆ, ಗ್ಯಾಂಗ್ ಚಟುವಟಿಕೆ ಅಥವಾ ಸಾರ್ವಜನಿಕ ಅಶಾಂತಿ ಕಂಡು ಬಂದರೆ ಕಾನೂನು ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
- ಪೊಲೀಸ್ ಘಟಕಾಧಿಕಾರಿಗಳು ರೌಡಿ ನಿಗ್ರಹ ದಳ ರಚಿಸಿ 7 ದಿನದಲ್ಲಿ ವರದಿ ಸಲ್ಲಿಸಬೇಕು.
ಇದನ್ನೂ ಓದಿ : ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ – ಸುರ್ಜೇವಾಲ!
Author: Btv Kannada
Post Views: 688









