ಬೆಂಗಳೂರು : ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದಾರೆ. ಅವರು ನಮ್ಮ ಕ್ಯಾಬಿನೆಟ್ನಲ್ಲಿ ಮುಂದುವರಿಯುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.
ರಾಮಲಿಂಗಾರೆಡ್ಡಿ ರಾಜೀನಾಮೆ ಕುರಿತು ನಾನು, ಸಿದ್ದರಾಮಯ್ಯ, ಸಿಎಂ ಡಿಕೆಶಿ ಹಾಗೂ ಬಿ.ಕೆ. ಹರಿಪ್ರಸಾದ್ ಸೇರಿ ನಾಲ್ವರೂ ಒಟ್ಟಾಗಿ ಕುಳಿತು ಸುದೀರ್ಘ ಚರ್ಚೆ ನಡೆಸಿದೆವು. ರಾಜೀನಾಮೆ ವಾಪಸ್ ಪಡೆಯುವಂತೆ ಅವರಲ್ಲಿ ಮನವಿ ಮಾಡಿಕೊಂಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿರುವ ಅವರು ರಾಜೀನಾಮೆ ಹಿಂಪಡೆದಿದ್ದು, ನಮ್ಮ ಜೊತೆ ಸಚಿವರಾಗಿ ಕೆಲಸ ಮುಂದುವರಿಸಲಿದ್ದಾರೆ ಎಂದು ಸುರ್ಜೇವಾಲ ಹೇಳಿದರು.
ಎನ್ಎಸ್ಯುಐನಿಂದಲೂ ಬಿ.ಕೆ ಹರಿಪ್ರಸಾದ್ ಜೊತೆ ರಾಮಲಿಂಗಾರೆಡ್ಡಿ ಇದ್ದರು, ವಿದ್ಯಾರ್ಥಿ ಸಂಘಟನೆಯಿಂದಲೂ ಅವರ ಜೊತೆಗಿದ್ದಾರೆ. ರಾಮಲಿಂಗಾರೆಡ್ಡಿ ಅವರು 8 ಬಾರಿ ಶಾಸಕರಾಗಿದ್ದಾರೆ, ದೊಡ್ಡ ಮತದೊಂದಿಗೆ ಗೆದ್ದು ಬಂದಿದ್ದಾರೆ. ಪಕ್ಷಕ್ಕೆ ರಾಮಲಿಂಗಾರೆಡ್ಡಿ ಅಮೂಲ್ಯ ಎಂದು ಸುರ್ಜೇವಾಲ ಹೇಳಿದರು.
ಇದೇ ವೇಳೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲ, ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಈ ವಿಚಾರವನ್ನು ಇಟ್ಟುಕೊಂಡು ಸಾಕಷ್ಟು ಟೀಕೆ ಮಾಡಿದ್ದರು ಮತ್ತು ಗೊಂದಲ ಮೂಡಿಸಿ ಸಂಭ್ರಮಿಸಿದ್ದರು ಎಂದರು.
ಇನ್ನು ಕಾಂಗ್ರೆಸ್ ಯೋಜನೆಗಳ ಬಗ್ಗೆ ಮಾತನಾಡಿ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ ಕೊಟ್ಟಿದ್ದು ಕಾಂಗ್ರೆಸ್, 10 ಕೆ.ಜಿಯ ಅನ್ನಭಾಗ್ಯ, ಯುವನಿಧಿ ಯೋಜನೆ ಕೊಡ್ತಿದ್ದೇವೆ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ನೀಡಿದ್ದೇವೆ, ಇದು ಕನ್ನಡಿಗರಿಗಾಗಿ ನೀಡಿದ ಗ್ಯಾರಂಟಿ ಎಂದಿದ್ದಾರೆ.
ಇದನ್ನೂ ಓದಿ : KBJNL ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆ – ಇಬ್ಬರು ಅಧಿಕಾರಿಗಳು ‘ಲೋಕಾ’ ಬಲೆಗೆ!








