‘ಮ್ಯಾಂಗೋ ಪಚ್ಚ’ ಗ್ರ್ಯಾಂಡ್ ರಿಲೀಸ್ – ಎಲ್ಲೆಡೆ ಭರ್ಜರಿ ರೆಸ್ಪಾನ್ಸ್.. ಸಂಚಿತ್ ಸಂಜೀವ್ ಮಾಸ್ ಲುಕ್​ಗೆ ಫ್ಯಾನ್ಸ್​ ಫಿದಾ!

ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು, ಸಂಚಿತ್ ಸಂಜೀವ್ ಮಾಸ್ ಲುಕ್​ಗೆ ಸಿನಿಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿವೇಕ್ ಆಕ್ಷನ್ ಕಟ್ ಹೇಳಿದ್ದಾರೆ. ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಚೊಚ್ಚಳ ಸಿನಿಮಾ ಇಂದು ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಚಿತ್ರಮಂದಿರಗಳ ಮುಂದೆ ಮುಂಜಾನೆಯಿಂದಲೇ ಕಟೌಟ್‌ಗಳು, ಹೂವಿನ ಹಾರ ಹಾಗೂ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಒಂದಷ್ಟು ನೈಜ ಘಟನೆಗಳಿಂದ ಪ್ರೇರಣೆಗೊಂಡು ‘ಮ್ಯಾಂಗೋ ಪಚ್ಚ’ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಗಾಂಜಾ ದಂಧೆಯ ಚಿತ್ರಣ ಇದೆ. ಮೈಸೂರಿನಲ್ಲಿ ಆಗೆಲ್ಲ ಗಾಂಜಾ ಹೇಗೆಲ್ಲ ಮಾರಾಟ ಆಗ್ತಾ ಇತ್ತು. ಅದನ್ನ ಯುವಕರು ಹೇಗೆಲ್ಲ ರಿಸೀವ್ ಮಾಡುತ್ತಿದ್ದರು ಅನ್ನೋದು ಇದರಲ್ಲಿದೆ. ಆದರೆ, ಇದು ಪ್ರಶಾಂತ್ ಅನ್ನುವ ಯುವಕ ಮುಂದೆ ಮ್ಯಾಂಗೋ ಪಚ್ಚ ಆದ ಅನ್ನೋದರ ಕತೆ ಈ ಚಿತ್ರದಲ್ಲಿದೆ.

‘ಮ್ಯಾಂಗೋ ಪಚ್ಚ’ದಲ್ಲಿ ಸಂಚಿತ್ ಸಂಜೀವ್ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಲವರ್ ಬಾಯ್ ಆಗಿಯೂ ಸಂಚಿತ್ ಅವರು ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಪ್ರಶಾಂತ್ ಹಿರೇಮಠ್, ಮ್ಯಾಕ್ಸ್ ಮಂಜು, ಹಂಸಾ, ಮಯೂರ್ ಪಟೇಲ್, ಜೈ ಗೋಪಿನಾಥ್ ಮುಂತಾದವರು ನಟಿಸಿದ್ದಾರೆ. 

2000ನೇ ಇಸವಿಯ ಆಸುಪಾಸಿನಲ್ಲಿದ್ದ ಮೈಸೂರನ್ನು ತೋರಿಸುವುದು ಅಷ್ಟು ಸುಲಭವಲ್ಲ. ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್ ಅವರ ತಂಡ ಆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೂಡ ಮೆಚ್ಚುವಂತಿದೆ. ತಾಂತ್ರಿಕವಾಗಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ.

ಇದನ್ನೂ ಓದಿ : ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ ಅಣ್ಣಾಮಲೈ!

Btv Kannada
Author: Btv Kannada

Leave a Comment

Read More

Read More