“ಬಲರಾಮನ ದಿನಗಳು” ಸಿನಿಮಾ ಜೂ.26ಕ್ಕೆ ರಿಲೀಸ್!

ಬಲರಾಮನ ದಿನಗಳು ಎರಡೂ ವಿಭಿನ್ನ ಹಾಡು ಮತ್ತು ಟೀಸರ್​ನಿಂದ ಪ್ರೇಕ್ಷಕರ ಗಮನ ಸೆಳೆದಿರೋ ಹೊಸ ನಿರೀಕ್ಷೆ ಹುಟ್ಟಿಸಿರೋ ಚಿತ್ರ. ಬಲರಾಮನ ದಿನಗಳು ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡ್ತಿದ್ದು, ಜೂನ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗ್ತಿದೆ.

ಬಲರಾಮನ ದಿನಗಳು ಚಿತ್ರ ಆ ದಿನಗಳ ಮತ್ತೊಂದು ಅಧ್ಯಾಯ. ಆ ದಿನಗಳು ಖ್ಯಾತಿಯ ಕೆ.ಎಂ ಚೈತನ್ಯ ನಿರ್ದೇಶನದ ಮತ್ತೊಂದು ಕಲ್ಟ್ ಕ್ಲಾಸಿಕ್. ಪದ್ಮಾವತಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಬಲರಾಮನ ದಿನಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

80ರ ದಶಕದ ಕಥೆಯಾಗಿರೋ ಈ ಚಿತ್ರಕ್ಕೆ ವೇಣುರವರ ಛಾಯಾಗ್ರಹಣವಿದೆ. ವಿನೋದ್ ಪ್ರಭಾಕರ್ ನಾಯಕನಾಗಿ ಬಲರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.

ಆ ದಿನಗಳು ಚಿತ್ರದ ಪಾತ್ರಗಳು ಇಲ್ಲೂ ಮುಂದುವರೆದಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ,ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಹಲವು ಪ್ರತಿಭಾನ್ವಿತ ಕಲಾವಿದ್ರ ದಂಡು ಈ ಚಿತ್ರದಲ್ಲಿದೆ.

ದಕ್ಷಿಣ ಭಾರತದ ಖ್ಯಾತ ಸಂಗೀತ‌ ನಿರ್ದೇಶಕ ಸಂತೋಷ್ ನಾರಾಯಣ್,‌ ಸಂಗೀತ ಸಂಯೋಜಿಸಿರೋದು ಈ ಚಿತ್ರದ ಹೈಲೈಟ್. ಹೆಚ್ ಸಿ ವೇಣು ಛಾಯಾಗ್ರಹಣ ಹರಿದಾಸ್ ಕೆ.ಜಿ.ಎಫ್ ಸಂಕಲನ‌ ಚಿತ್ರಕ್ಕಿದೆ. ಈಗಾಗ್ಲೇ ಬಿಡುಗಡೆಯಾಗಿರೋ ಟೀಸರ್ ಹಾಗೂ ಹಾಡುಗಳು ಚಿತ್ರದ ಮೇಲೆ ವಿಶೇಷ ಕುತೂಹಲ ಹುಟ್ಟಿಸಿದ್ದು, ದೊಡ್ಡದಾಗಿ ಮ್ಯಾಜಿಕ್ ಮಾಡೋ ಸೂಚನೆ ಕೊಡ್ತಿದೆ. ಹಿಟ್ ಬರಗಾಲದಲ್ಲಿ ಈ ಸಿನ್ಮಾ ದೊಡ್ಡ ಹಿಟ್ ಆಗೋ ತರಹ ಕಾಣ್ತಿದೆ. ಅದೇನೆ ಇದ್ರೂ ಜೂನ್ 26ನೇ ತಾರೀಖು ಬಲರಾಮನ ಅಸಲಿ ಬಲ ಏನು ಅನ್ನೋದು ಗೊತ್ತಾಗಲಿದೆ.

ಇದನ್ನೂ ಓದಿ : ಸಂಸದ ಡಾ. ಕೆ. ಸುಧಾಕರ್​​ಗೆ ಗುಮ್ಮಿದ ಶಾಸಕ ಎಸ್. ಆರ್. ವಿಶ್ವನಾಥ್​ ಬೆಂಬಲಿಗರು!

Btv Kannada
Author: Btv Kannada

Leave a Comment

Read More