ಸಿಎನ್‌ಜಿ ಬೆಲೆ ಮತ್ತೆ ಏರಿಕೆ – ಪ್ರತಿ ಕೆಜಿಗೆ 2.ರೂ ಹೆಚ್ಚಳ!

ಮುಂಬೈ : ವಾಹನ ಸವಾರರಿಗೆ ಮತ್ತೆ ಸಿಎನ್‌ಜಿ ದರ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್‌, ಡೀಸೆಲ್‌ ಬಳಿಕ ಇದೀಗ ಸಿಎನ್‌ಜಿ ದರ ಮತ್ತೆ ಪ್ರತಿ ಕೆಜಿಗೆ 2 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್ ಲಿಮಿಟೆಡ್ (MGL) ಸಂಸ್ಥೆಯು ಮುಂಬೈನಲ್ಲಿ ಇಂದಿನ ಅನ್ವಯವಾಗುವಂತೆ ಹೊಸ ದರ ಘೋಷಿಸಿದೆ.

ಪರಿಷ್ಕೃತ ದರದಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದ್ದು, 86 ರೂ.ಗಳಿಗೆ ಏರಿಕೆಯಾಗಿದೆ. ಇನ್ನೂ ಗೃಹ ಬಳಕೆಯ ಪಿಎನ್‌ಜಿ ಸ್ಟ್ಯಾಂಡರ್ಡ್‌ ಕ್ಯೂಬಿಕ್‌ ಮೀಟರ್‌ಗೆ 50 ಪೈಸೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.

ಕಳೆದ ಮೇ 26 ರಂದು ದೆಹಲಿಯಲ್ಲೂ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮುನ್ನ ಮುಂಬೈ ವ್ಯಾಪ್ತಿಯಲ್ಲಿ ಮೇ 14 ರಂದು 2 ರೂ. ಹೆಚ್ಚಳ ಮಾಡಲಾಗಿತ್ತು. ಸದ್ಯ ಈಗಿನ ಪರಿಷ್ಕೃತ ದರವು ಮುಂಬೈ, ಥಾಣೆ, ನವಿ ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್‌ ಪ್ರದೇಶದ (ಎಂಎಂಆರ್‌) ಇತರ ಭಾಗಗಳಿಗೆ ಅನ್ವಯವಾಗಲಿದೆ.

ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್‌‍ ಲಿಮಿಟೆಡ್‌ (ಎಂಜಿಎಲ್‌‍) ಕಲ್ಯಾಣ್‌‍, ರಾಯಗಢ, ರತ್ನಗಿರಿ, ಲಾತೂರ್‌, ಉಸ್ಮಾನಾಬಾದ್‌‍, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ ಹಲವಾರು ನಗರಗಳಿಗೆ ಅನಿಲ ಪೂರೈಸುತ್ತದೆ.

ಇದನ್ನೂ ಓದಿ : ನೂತನ ಸಿಎಂ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ – ಜೂ.3ಕ್ಕೆ ಡಿ.ಕೆ ಶಿವಕುಮಾರ್​ ಪಟ್ಟಾಭಿಷೇಕ!

Btv Kannada
Author: Btv Kannada

Leave a Comment

Read More