ಬೆಂಗಳೂರು : ಬೌಲೆವಾರ್ಡ್ ಮತ್ತು A2B ನಡುವಿನ ಸಂಪರ್ಕ ರಸ್ತೆಯಲ್ಲಿ ಬುಧವಾರ ಮತ್ತು ನಿನ್ನೆ ಸಂಜೆ ಸುಮಾರು 7:30ಕ್ಕೆ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹಾಗಾಗಿ ಅರಣ್ಯ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಕೆಲವು ದಿನಗಳವರೆಗೆ ಬೌಲೆವಾರ್ಡ್ ಆವರಣದ ಹೊರಗೆ ಮುಂಜಾನೆ ಮತ್ತು ಸಂಜೆ ಅನಗತ್ಯವಾಗಿ ಓಡಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿ. ಇನ್ನು ಮಕ್ಕಳು ಹೊರಾಂಗಣದಲ್ಲಿದ್ದಾಗ ಯಾವಾಗಲೂ ಹಿರಿಯರು ಅವರ ಜೊತೆಗಿರಿ, ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ. ಹಾಗೆಯೇ ನಿಮ್ಮ ಸಾಕುಪ್ರಾಣಿಗಳನ್ನೂ ಒಂಟಿಯಾಗಿ ಬಿಡಬೇಡಿ ಎಂದು ಪ್ರಾಪರ್ಟಿ ಮ್ಯಾನೇಜ್ಮೆಂಟ್ ಟೀಂ ಕರೆ ನೀಡಿದೆ.
ತುರ್ತು ಪರಿಸ್ಥಿತಿಯಲ್ಲಿ ಅಥವಾ ಯಾವುದೇ ಅನುಮಾನಾಸ್ಪದ ಚಲನವಲನಗಳು ಕಂಡುಬಂದಲ್ಲಿ ತಕ್ಷಣವೇ ಸೆಕ್ಯೂರಿಟಿ ಡೆಸ್ಕ್ ಅಥವಾ ಮ್ಯಾನೇಜ್ಮೆಂಟ್ ಕಚೇರಿಯನ್ನು ಸಂಪರ್ಕಿಸಿ ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : 15 ಲಕ್ಷ ಲಂಚಕ್ಕೆ ಡಿಮ್ಯಾಂಡ್ – ಬೆಸ್ಕಾಂ ಎಇಇ ಅರೆಸ್ಟ್!
Author: Btv Kannada
Post Views: 240








