ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಎಂ ಸ್ಥಾನದ ಬದಲಾವಣೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದಾರೆ. ಸಿಎಂ ರಾಜೀನಾಮೆ ಬೆನ್ನಲ್ಲೇ ದೆಹಲಿಯಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತಾದ ಸರ್ಕಸ್ ಜೋರಾಗಿದೆ.
ನೂತನ ಸಿಎಂಗೆ ಇದೀಗ ಹೊಸ ಸಂಪುಟ ರಚನೆ ಮಾಡುವುದು ಸವಾಲಾಗಿ ಮಾರ್ಪಟ್ಟಿದೆ. ಹಾಗಾಗಿ ಇಂದು ದೆಹಲಿಯಲ್ಲಿ ಮಹತ್ವದ ಹೈಕಮಾಂಡ್ ಸಭೆ ನಡೆದಿದ್ದು, ಈ ವೇಳೆ 10 ಪ್ರಮುಖ ನಾಯಕರ ಸಚಿವ ಸ್ಥಾನವನ್ನು ಅಂತಿಮಗೊಳಿಸಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಇಂದು ಸುದೀರ್ಘ ಸಭೆ ನಡೆಯಿತು. ಈ ಹೈವೋಲ್ಟೇಜ್ ಸಭೆಯ ನಂತರ 10 ಸಚಿವರುಗಳ ಸಂಭಾವ್ಯ ಪಟ್ಟಿಗೆ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಎಚ್.ಕೆ ಪಾಟೀಲ್, ಪ್ರಿಯಾಂಕ ಖರ್ಗೆ, ಡಾ. ಜಿ ಪರಮೇಶ್ವರ್, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಯತೀಂದ್ರ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಎನ್.ಎ ಹ್ಯಾರಿಸ್, ಕೆ.ಜೆ ಜಾರ್ಜ್ ಮತ್ತು ರಾಮಲಿಂಗ ರೆಡ್ಡಿ ಹೆಸರನ್ನು ಹೈಕಮಾಂಡ್ ಸಚಿವರುಗಳ ಪಟ್ಟಿಗೆ ಅಂತಿಮಗೊಳಿಸಿದೆ.
ಹೈಕಮಾಂಡ್ ಕ್ಲಿಯರ್ ಮಾಡಿರುವ 10 ಸಚಿವರುಗಳ ಸಂಭಾವ್ಯ ಪಟ್ಟಿ :
ಎಚ್.ಕೆ ಪಾಟೀಲ್

ಪ್ರಿಯಾಂಕ ಖರ್ಗೆ

ಡಾ. ಜಿ ಪರಮೇಶ್ವರ್

ಎಂ.ಬಿ ಪಾಟೀಲ್

ಸತೀಶ್ ಜಾರಕಿಹೊಳಿ

ಯತೀಂದ್ರ ಸಿದ್ದರಾಮಯ್ಯ

ಈಶ್ವರ್ ಖಂಡ್ರೆ

ಎನ್.ಎ ಹ್ಯಾರಿಸ್

ಕೆ.ಜೆ ಜಾರ್ಜ್

ರಾಮಲಿಂಗ ರೆಡ್ಡಿ

ಇದನ್ನೂ ಓದಿ : ಮೂರು ದಿನಗಳ ಬಳಿಕ ಮೌನ ಮುರಿದ ಡಿಕೆ ಶಿವಕುಮಾರ್ – ಪ್ರಮಾಣವಚನದ ಬಗ್ಗೆ ಹೇಳಿದ್ದೇನು?








