ಸತ್ಯದೇವ್ 16ನೇ ಸಿನಿಮಾ ಘೋಷಣೆ – ‘ಸಮವರ್ತಿ’ ಟೈಟಲ್ ಹಾಗೂ ಫಸ್ಟ್​ಲುಕ್ ರಿಲೀಸ್!

ತೆಲುಗು ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಮಿಂಚಿರುವ ಸತ್ಯದೇವ್‌ ಅವರ 16ನೇ ಸಿನಿಮಾ ಘೋಷಣೆಯಾಗಿದೆ. ಟೈಟಲ್ ಜೊತೆಗೆ ಫಸ್ಟ್ ಲುಕ್​ನ್ನು ಚಿತ್ರತಂಡ ಅನಾವರಣ ಮಾಡಿದೆ. ಚಿತ್ರಕ್ಕೆ ಸಮವರ್ತಿ ಎಂಬ ಶೀರ್ಷಿಕೆ ಇಡಲಾಗಿದೆ.

ಫಸ್ಟ್ ಲುಕ್​ನಲ್ಲಿ ಸತ್ಯದೇವ್ ಹೆಡ್ ಫೋನ್ ಧರಿಸಿ ರಡಗ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊಡಲಿ ಹಾಗೂ ಚಾಕು ಹಿಡಿದು ಅನೇಕ ದಾಳಿಕೋರರು ಅವರ ಕಡೆ ನುಗ್ಗಿರುವುದನ್ನು ಪೋಸ್ಟರ್​ನಲ್ಲಿ ನೋಡಬಹುದು.

ಸಮವರ್ತಿ ಸಿನಿಮಾಗೆ ಅಜಯ್ ನಾಗ್ ವಿ ಆಕ್ಷನ್ ಕಟ್ ಹೇಳಿದ್ದಾರೆ. ರುದ್ರ ಪಿಕ್ಚರ್ಸ್ ಹಾಗೂ ಪಂಚಭೂತ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಶಿವಚರಣ್ ರೆಡ್ಡಿ ಜಕ್ಕಿಡಿ ಮತ್ತು ಶಶಿಧರ್ ರೆಡ್ಡಿ ಪದಮತಿ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ತೆಲುಗು ಜೊತೆಗೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಮವರ್ತಿ ಸಿನಿಮಾ ಬಿಡುಗಡೆಯಾಗಲಿದೆ.

ಇಕೋಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಮವರ್ತಿ ಚಿತ್ರ ಸತ್ಯದೇವ್ ಕರಿಯರ್​ನ ಹೈ ಆಕ್ಷನ್ ಚಿತ್ರವಾಗಿದೆ. ಸತ್ಯದೇವ್ ಕಾಂಚಾರಣ ಜೊತೆಗೆ ದಿಲೇಶ್ ಪೋಥನ್, ರಾಜೀವ್ ಕನಕಲಾ, ಗನವಿ ಲಕ್ಷ್ಮಣ್, ರವೀಂದ್ರ ವಿಜಯ್, ಮೋಹನ್ ಭಗತ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.

ಕಲಾ ನಿರ್ದೇಶಕದ ಜವಾಬ್ದಾರಿಯನ್ನು ಮಾಂಡ್ರು ರವಿಕುಮಾರ್ ಹೊತ್ತಿದ್ದು, ಪ್ರಿಯಾಂಕಾ ರೆಬೆಕಾ ಶ್ರೀನಿವಾಸ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಉಲ್ಲಾಸ್ ಹೈದೂರ್ ಪ್ರೊಡಕ್ಷನ್ ಡಿಸೈನ್ ಜವಾಬ್ದಾರಿ ನಿಭಾಯಿಸಿದ್ದಾರೆ. ‌ಆದಿತ್ಯ ತಿವಾರಿ ಸಂಕಲನ, ಹರ್ಷ ಮಲ್ಲಿಕಾರ್ಜುನ್, ದೇವ್ ದೀಪ್ ಗಂಡಿಕುಂದು ಛಾಯಾಗ್ರಹಣ ಹಾಗೂ ಸಿಂಜಿತ್ ಯರ್ರಮಿಲ್ಲಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಸಿದ್ದರಾಮಯ್ಯ!

Btv Kannada
Author: Btv Kannada

Leave a Comment

Read More

Read More