ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರಿಗೆ ಉಪಹಾರ ಕೂಟ ಆಯೋಜಿಸಿದ್ದು, ಮಧ್ಯಾಹ್ನ 3ಗಂಟೆಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸುವ ತೀರ್ಮಾನ ಕೈಗೊಂಡ ನಂತರ, ಇಂದು ಬೆಳಗ್ಗೆ ಎಲ್ಲಾ ಸಂಪುಟ ಸಹೋದ್ಯೋಗಿಗಳನ್ನು ಕರೆದು ತಮ್ಮ ನಿವಾಸದಲ್ಲಿ ಸಿಎಂ ಆಗಿ ಕೊನೆಯದಾಗಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದರು. ಈ ಉಪಹಾರ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಬಹುತೇಕ ಎಲ್ಲಾ ಸಚಿವರು ಭಾಗಿಯಾಗಿದ್ದರು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದ ಎರಡು ಅಪರೂಪದ ಫೋಟೋಗಳು ಬಿಡುಗಡೆಯಾದ ಕೇವಲ ಒಂದು ಗಂಟೆಯಲ್ಲೇ ಇಂಟರ್ನೆಟ್‌ನಲ್ಲಿ ದೊಡ್ಡ ಹವಾ ಎಬ್ಬಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ.

ಹೌದು.. ಫೋಟೋ ರಿಲೀಸ್ ಆದ ಕೇವಲ ಒಂದು ಗಂಟೆಯಲ್ಲಿ ಲಕ್ಷಾಂತರ ಮಂದಿ ತಮ್ಮ ಡಿಪಿಯಲ್ಲಿ ಹಾಕಿಕೊಂಡಿದ್ದಾರೆ. ಕೋಟಿ ಕೋಟಿ ಮಂದಿಯ ಪೇಜ್ಗಳಿಗೆ ಈ ಫೋಟೋಗಳು ರಿಚ್ ಆಗಿದ್ದು, ಹಲವರು ಮ್ಯೂಸಿಕ್ ಮಾಡಿ ರೀಲ್ಸ್ಗಳನ್ನು ಮಾಡಿಕೊಂಡಿದ್ದಾರೆ.
ಫೋಟೋಗಳು ಮಾಧ್ಯಮಗಳಲ್ಲಿ ಮತ್ತು ಅಧಿಕೃತ ಪೇಜ್‌ಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ, ರಾಜ್ಯಾದ್ಯಂತ ಲಕ್ಷಾಂತರ ಮಂದಿ ಅಭಿಮಾನಿಗಳು, ಯುವಕ-ಯುವತಿಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಚಿತ್ರಗಳನ್ನು ತಮ್ಮ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಖಾತೆಗಳ ಡಿಪಿಗಳನ್ನಾಗಿ ಮಾಡಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜೋಡಿ ಹಾವು ಮುಂಗಸಿ ಎಂದು ಬಿಂಬಿಸುತ್ತಿದ್ದರು. ಇದೀಗ ಇಬ್ಬರೂ ನಾಯಕರು ಪರಸ್ಪರ ಅತ್ಯಂತ ಆತ್ಮೀಯವಾಗಿ ಅಪ್ಪಿಕೊಂಡ ದೃಶ್ಯ ಹಾಗೂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಡಿ.ಕೆ. ಶಿವಕುಮಾರ್ ಆಶೀರ್ವಾದ ಪಡೆದಿರೋದು ಹೊಸ ಅಲೆಯನ್ನೇ ಸೃಷ್ಟಿಸಿತು. ಈ ಫೋಟೋವನ್ನು ಯುವಕರು, ಯುವತಿಯರು, ಕಾಂಗ್ರೆಸ್ ಪಕ್ಷದವರು, ಮತ್ತಿತರರು ಇದನ್ನು ತಮ್ಮ ತಮ್ಮ ಪೇಜ್‌ಗಳಲ್ಲಿ ಸ್ಟೋರ್ ಮಾಡಿಕೊಂಡರು. ಒಟ್ಟಿನಲ್ಲಿ ಈ ಎರಡು ಫೋಟೋಗಳು ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿತು.
ಇದನ್ನೂ ಓದಿ : ಟ್ರೇಲರ್ನಲ್ಲೇ ಗಮನ ಸೆಳೆದ “ಕ್ಷಮೆಯಿರಲಿ ತಂದೆ” – ಈ ಸಿನಿಮಾ ಮೂಲಕ ನಿರ್ಮಾಣ, ನಿರ್ದೇಶನಕ್ಕೆ ನಟ ಎಂ.ಎನ್ ಸುರೇಶ್ ಎಂಟ್ರಿ!








