ವಿಧಾನ ಪರಿಷತ್ ಚುನಾವಣೆ – ಹಿರಿಯ ನಟಿ ಶ್ರುತಿಗೆ ಒಲಿದ ಅದೃಷ್ಟ.. BJPಯಿಂದ ಶ್ರುತಿಗೆ MLC ಟಿಕೆಟ್!

ಬೆಂಗಳೂರು : ಕರ್ನಾಟಕದ 7 ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ಜೂನ್.18ರಂದು ಚುನಾವಣೆ ನಡೆಯಲಿದೆ. ಒಟ್ಟು 7 ವಿಧಾನ ಪರಿಷತ್ ಸದಸ್ಯರ (MLC) ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಹಿರಿಯ ನಟಿ ಶ್ರುತಿ ಅವರಿಗೆ ಅದೃಷ್ಟ ಒಲಿದಿದ್ದು, BJP ಯಿಂದ ನಟಿ ಶ್ರುತಿ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿದೆ.

7 ವಿಧಾನ ಪರಿಷತ್​ನ ಸ್ಥಾನಗಳಲ್ಲಿ ಬಿಜೆಪಿಗೆ 2, ಕಾಂಗ್ರೆಸ್​ಗೆ 5 ಸ್ಥಾನವಿದ್ದು, ಬಿಜೆಪಿಯ 2 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಹಿರಿಯ ನಟಿ ಶ್ರುತಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಟಿ ಶ್ರುತಿ ಅವರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದು, ಇದೀಗ ಶ್ರುತಿಗೆ MLC ಟಿಕೆಟ್ ನೀಡಲು ಹೈಕಮಾಂಡ್‌ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸ್ಟಾರ್ ನಟಿಯಾಗಿ ಮಿಂಚಿದ್ದ ಶ್ರುತಿ ಅವರು, ಬಳಿಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು. ವಿವಿಧ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ನಟಿ ಶ್ರುತಿ ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು. ಇದೀಗ ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸಿದ ನಟಿ ಶ್ರುತಿಗೆ ಅದೃಷ್ಟ ಒಲಿದುಬಂದಿದೆ.

ಜೂನ್ 18 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಕಾಂಗ್ರೆಸ್‌ನ 5 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 7 ನಾಯಕರು ವಿಧಾನ ಪರಿಷತ್ ಪ್ರವೇಶಸಲಿದ್ದಾರೆ.

ಇದನ್ನೂ ಓದಿ : ಜೂ.18ರಂದು ಕರ್ನಾಟಕದ 7 ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ಚುನಾವಣೆ!

Btv Kannada
Author: Btv Kannada

Leave a Comment

Read More

Read More