ಜೂ.18ರಂದು ಕರ್ನಾಟಕದ 7 ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ಚುನಾವಣೆ! 

ನವದೆಹಲಿ : ಕರ್ನಾಟಕ ಮತ್ತು ಬಿಹಾರ ವಿಧಾನ ಪರಿಷತ್​ನ ಚುನಾವಣೆಗೆ ಭಾರತ ಚುನಾವಣಾ ಆಯೋಗ ಇಂದು ವೇಳಾಪಟ್ಟಿ ಪ್ರಕಟಿಸಿದೆ.

ಒಟ್ಟು 16 ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದ್ದು, ಈ ಪೈಕಿ ಬಿಹಾರದ 9 ಮತ್ತು ಕರ್ನಾಟಕದ 7 ಸ್ಥಾನಗಳಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.

ಚುನಾವಣಾ ಆಯೋಗದ ಅಧಿಕೃತ ಅಧಿಸೂಚನೆಯಂತೆ ಜೂನ್ 18ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಬಿಹಾರದ ಸದಸ್ಯರ ಅವಧಿಯು ಜೂನ್ 28ಕ್ಕೆ ಹಾಗೂ ಕರ್ನಾಟಕದ ಸದಸ್ಯರ ಅವಧಿಯು ಜೂನ್ 30ಕ್ಕೆ ಕೊನೆಗೊಳ್ಳಲಿದೆ.

ವಿಧಾನ ಪರಿಷತ್​ನ ಸದಸ್ಯರಾದ ಗೋವಿಂದ ರಾಜು, ನಾಸೀರ್ ಅಹ್ಮದ್, ಎನ್​. ನಾಗರಾಜು, ಪ್ರತಾಪ್ ಸಿಂಹ ನಾಯಕ್ ಕೆ, ತಿಮ್ಮಣ್ಣಪ್ಪ, ಸುನಿಲ್ ವಲ್ಯಾಪುರ ಹಾಗೂ ಬಿ.ಕೆ ಹರಿಪ್ರಸಾದ್ ಅವಧಿಯು ಜೂನ್. 30ರಂದು ಕೊನೆಗೊಳ್ಳಲಿದೆ.

ವೇಳಾಪಟ್ಟಿ:

ಚುನಾವಣೆ ಅಧಿಸೂಚನೆ – ಜೂನ್.1 2026

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ – ಜೂನ್.8 2026

ನಾಮಪತ್ರ ಪರಿಶೀಲನೆ – ಜೂನ್.9 2026

ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ – ಜೂನ್.11 2026

ಮತದಾನ – ಜೂನ್.18 2026

ಮತ ಎಣಿಕೆ – ಜೂನ್.18 2026

ಇದನ್ನೂ ಓದಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯಾಣಿಸ್ತಿದ್ದ ಕಾರು ಅಪಘಾತ!

Btv Kannada
Author: Btv Kannada

Leave a Comment

Read More

Read More