ಭಾರತ ನನ್ನನ್ನ 100% ನಂಬಬಹುದು – ಡೊನಾಲ್ಡ್ ಟ್ರಂಪ್!

ನವದೆಹಲಿ : ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಲ್ಲಿರುವ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರಿಗೆ ದೂರವಾಣಿ ಕರೆ ಮಾಡಿ, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮಾತುಗಳನ್ನಾಡಿದರು.

ನಾನು ಭಾರತವನ್ನು, ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಭಾರತ ಬಯಸಿದ್ದೆಲ್ಲವೂ ಅವರಿಗೆ ಸಿಗುತ್ತದೆ, ಭಾರತ ನನ್ನನ್ನ 100% ನಂಬಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಕರೆಯಲ್ಲಿ ಹೇಳಿದ್ದಾರೆ.

ಭಾರತಕ್ಕೆ ಸಹಾಯ ಬೇಕಾದರೆ, ಎಲ್ಲಿಗೆ ಕರೆ ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರು ಇಲ್ಲಿಯೇ ಕರೆ ಮಾಡುತ್ತಾರೆ. ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ನಾವು ದಾಖಲೆಗಳನ್ನು ಸ್ಥಾಪಿಸುತ್ತಿದ್ದೇವೆ. ನಮ್ಮಲ್ಲಿ ದಾಖಲೆಯ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಮತ್ತು ಭಾರತ ಪಡೆಯಲು ಬಯಸುವ ಯಾವುದಾದರೂ ವಿಷಯವಿದೆ. ನಾನು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ : 2 ವಾರದಲ್ಲಿ 4ನೇ ಬಾರಿ ಇಂಧನ ದರ ಏರಿಕೆ – ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ 2 ರೂ. ಹೆಚ್ಚಳ!

Btv Kannada
Author: Btv Kannada

Leave a Comment

Read More