ಅಮೆರಿಕದ ಶ್ವೇತಭವನ ಬಳಿ ಗುಂಡಿನ ದಾಳಿ – ಪ್ರತಿದಾಳಿಗೆ ಬಂದೂಕುಧಾರಿ ಸಾವು!

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಬಳಿ ನಿನ್ನೆ ಸಂಜೆ ಭೀಕರ ಗುಂಡಿನ ದಾಳಿ ನಡೆದಿದ್ದು, ಪ್ರತಿದಾಳಿಯಲ್ಲಿ ಬಂದೂಕುಧಾರಿಯೊಬ್ಬ ಮೃತಪಟ್ಟಿದ್ದಾನೆ.

ವ್ಯಕ್ತಿಯೊಬ್ಬ ಶ್ವೇತ ಭವನದ ಬಳಿಯ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಚೆಕ್‌ಪಾಯಿಂಟ್ ಬಳಿ ಬಂದು ತನ್ನ ಬ್ಯಾಗ್‌ನಿಂದ ಗನ್ ಹೊರತೆಗೆದು ಅಲ್ಲಿ ನಿಯೋಜನೆಗೊಂಡಿದ್ದ ಅಮೆರಿಕ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ತಕ್ಷಣವೇ ಭದ್ರತಾ ಅಧಿಕಾರಿಗಳು ಆತನ ಮೇಲೆ ಪ್ರತಿದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಂಕಿತನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಸಾವನ್ನಪ್ಪಿದ್ದಾನೆ.

ಗುಂಡಿನ ಚಕಮಕಿಯ ನಡುವೆ ಅಲ್ಲೇ ಸಮೀಪದಲ್ಲಿದ್ದ ಒಬ್ಬ ಸಾರ್ವಜನಿಕ ವ್ಯಕ್ತಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಭದ್ರತಾ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಘಟನೆ ನಡೆದ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತ ಭವನದಲ್ಲೇ ಇದ್ದರು, ಆದರೆ ಅವರಿಗೆ ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ ಮತ್ತು ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಸೀಕ್ರೆಟ್ ಸರ್ವೀಸ್ ಖಚಿತಪಡಿಸಿದೆ.

ಇದನ್ನೂ ಓದಿ : ಪದೇ ಪದೇ ಕಚೇರಿಗೆ ಬಂದ್ರೆ ಕೇಸ್ ಹಾಕಿಸ್ತೇನೆ – ಸಾರ್ವಜನಿಕರಿಗೆ ತಹಶೀಲ್ದಾರ್ ಧಮ್ಕಿ!

Btv Kannada
Author: Btv Kannada

Leave a Comment

Read More

Read More