ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇಂದು 21 ಟಿವಿಕೆ ಶಾಸಕರು ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರು ಸೇರಿದಂತೆ ಒಟ್ಟು 23 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಬೆಳಗ್ಗೆ 10 ಗಂಟೆಗೆ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಇದೀಗ ವಿಜಯ್ ನೇತೃತ್ವದ ಸಚಿವ ಸಂಪುಟದ ಬಲ 33ಕ್ಕೆ ಏರಿದೆ. ಆದರೆ ವಿಜಯ್ ಸಚಿವ ಸಂಪುಟದ ಒಟ್ಟು ಅನುಮೋದಿತ ಬಲ 35 ಆಗಿದ್ದು, ಇನ್ನೂ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವಕಾಶ ಇದೆ. ಆದರೆ ವಿಜಯ್ ಅವರು ತಮ್ಮ ಸರ್ಕಾರಕ್ಕೆ ಬೆಂಬಲ ನೀಡಿದ ಎಐಎಡಿಎಂಕೆ ಬಂಡಾಯ ಬಣವನ್ನು ಸರ್ಕಾರದಿಂದ ಹೊರಗಿಟ್ಟಿದ್ದಾರೆ.
ಶ್ರೀನಾಥ್, ಕಮಲಿ ಎಸ್., ಸಿ.ವಿಜಯಲಕ್ಷ್ಮಿ, ಆರ್.ವಿ. ರಂಜಿತ್‌ಕುಮಾರ್, ವಿನೋದ್, ರಾಜೀವ್, ಬಿ.ರಾಜ್‌ಕುಮಾರ್, ವಿ.ಗಾಂಧಿರಾಜ್, ಮಥನ್ ರಾಜಾ ಪಿ, ಜೆಗದೇಶ್ವರಿ ಕೆ, ರಾಜೇಶ್ ಕುಮಾರ್ ಎಸ್, ಎಂ.ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ತಿಬನ್, ರಮೇಶ್, ಪಿ.ವಿಶ್ವನಾಥನ್, ಕುಮಾರ್ ಆರ್, ತೆನ್ನರಸು ಕೆ, ವಿ.ಸಂಪತ್ ಕುಮಾರ್, ಮೊಹಮ್ಮದ್ ಫರ್ವಾಸ್ ಜೆ ಮತ್ತು ಡಿ. ಇಂದು ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ : ‘ಪಿಚ್ಚರ್’ ಚಿತ್ರದ ಹಾಡಿಗೆ ಧ್ವನಿಯಾದ ಶಿಲ್ಪಾ ಗಣೇಶ್ – ಅದ್ಭುತ ಕಂಠದ ಮೂಲಕ ಮೋಡಿ ಮಾಡಿದ ನಿರ್ಮಾಪಕಿ!








