ದರ್ಶನ್ – ವಿಜಯಲಕ್ಷ್ಮಿ ದಾಂಪತ್ಯಕ್ಕೆ 23 ವರ್ಷ – ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿಜಯಲಕ್ಷ್ಮಿ!

ಬೆಂಗಳೂರು : ನಟ ದರ್ಶನ್ – ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಇಂದಿಗೆ 23 ವರ್ಷ ತುಂಬಿದೆ. ದರ್ಶನ್ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಇದೀಗ ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಪ್ರತಿಯೊಂದು ಚಂಡಮಾರುತದಲ್ಲೂ… ಪ್ರತಿಯೊಂದು ಮೌನದಲ್ಲೂ… ನಾನು ನಿನ್ನ ಕೈ ಬಿಡೋದಿಲ್ಲ. ಪರಿಸ್ಥಿತಿಗಳು ದೂರ ಮಾಡಿದ್ರೂ, ನನ್ನ ಹೃದಯ ಯಾವತ್ತೂ ನಿನ್ನನ್ನೇ ಆಯ್ಕೆ ಮಾಡುತ್ತೆ. ಇಡೀ ಜಗತ್ತು ನಿನ್ನ ವಿರುದ್ಧ ನಿಂತರೂ… ನಾನು ನಿನ್ನ ಪಕ್ಕದಲ್ಲೇ ಇರುತ್ತೇನೆ ಎಂದು ವಿಜಯಲಕ್ಷ್ಮಿ ಭಾವನಾತ್ಮಕವಾಗಿ ಬರೆದುಕೊಂಡು ದರ್ಶನ್ ಕೈ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ದರ್ಶನ್ ಜಾಮೀನಿನ‌ ಮೇರೆಗೆ ಹೊರ ಬಂದಿದ್ದರು. ದರ್ಶನ್ – ವಿಜಯಲಕ್ಷ್ಮಿ ಜೋಡಿ ಕಳೆದ ಸಲ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದರು. ಇಂದು ದರ್ಶನ್ ಅನುಪಸ್ಥಿತಿ ನೆನೆದು ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :“ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ರಿಲೀಸ್!

Btv Kannada
Author: Btv Kannada

Leave a Comment

Read More

Read More