ತಿರುವನಂತಪುರಂ : ಕೇರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ ಸತೀಶನ್ ಹಾಗೂ ಇತರ 20 ಮಂದಿ ಸಂಪುಟ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಿಎಂ ಆಗಿ ಪ್ರದಗ್ರಹಣ ಮಾಡಲಿರುವ ವಿ.ಡಿ.ಸತೀಶನ್ ಸೇರಿದಂತೆ 14 ಮಂದಿ ಹೊಸ ಸಚಿವರು ಸಂಪುಟದಲ್ಲಿದ್ದಾರೆ. 21 ಸಚಿವರಲ್ಲಿ ಸತೀಶನ್ ಸೇರಿದಂತೆ 14 ಮಂದಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅಲ್ಲದೇ ಸಂಪುಟದಲ್ಲಿ ಇಬ್ಬರು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಸಮುದಾಯದ ಇಬ್ಬರು ಸದಸ್ಯರು ಸೇರಿದ್ದಾರೆ.
ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಸಚಿವರ ಪಟ್ಟಿ ಸಲ್ಲಿಸಿದ ನಂತರ, ರಾಜ್ಯಪಾಲರು ಸರ್ಕಾರ ರಚನೆಗೆ ಅನುಮೋದನೆ ನೀಡಿದರು. ಇಡೀ ಯುಡಿಎಫ್ ಸಚಿವಾಲಯ ಇಂದು ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಲಿದೆ. ಕಳೆದ 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಯುಡಿಎಫ್ ಸಂಪುಟ ಏಕಕಾಲದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ಇದಾಗಿದೆ.

ಇಂದು ಪ್ರಮಾಣ ಸ್ವೀಕಾರ ಸಮಾರಂಭದ ಹಿನ್ನೆಲೆ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಕೇರಳಕ್ಕೆ ತೆರಳಿದ್ದಾರೆ.
ಇದನ್ನೂ ಓದಿ : ಭೂಗತ ಪಾತಕಿ ವಿಕ್ಕಿ ಶೆಟ್ಟಿ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗೆ ಬೆದರಿಕೆ – FIR ದಾಖಲು!








