ವಿಜಯ್ ನೇತೃತ್ವದ TVK ಸರ್ಕಾರ 6 ತಿಂಗಳು ಉಳಿಯಲ್ಲ – ಡಿಎಂಕೆ ಶಾಸಕ ವಾಗ್ದಾಳಿ!

ಚೆನ್ನೈ : ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರ ಟಿವಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಡಿಎಂಕೆ ಹಿರಿಯ ನಾಯಕ ಮತ್ತು ತಿರುಚೆಂಡೂರು ಶಾಸಕ ಅನಿತ ರಾಧಾಕೃಷ್ಣನ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೋಸೆಫ್‌ ವಿಜಯ್‌ ಸರ್ಕಾರ ಆರು ತಿಂಗಳು ಕೂಡ ಉಳಿಯುವುದಿಲ್ಲ, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಈ ಬಗ್ಗೆ ದಕ್ಷಿಣ ತಮಿಳುನಾಡಿನ ಪಕ್ಷದ ಕಾರ್ಯಕ್ರಮವೊಂದರಲ್ಲಿ ರಾಧಾಕೃಷ್ಣನ್ ಮಾತನಾಡಿ, ಆಡಳಿತಾರೂಢ ತಮಿಳಗ ವೆಟ್ರಿ ಕಳಗಂನ ಹಿರಿಯ ನಾಯಕ ಆಧವ್ ಅರ್ಜುನ ವಿಲ್ಲಿವಕ್ಕಂ ಸ್ಥಾನವನ್ನು ಗೆದ್ದಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತಿರುಚೆಂದೂರಿನಲ್ಲಿ ನನ್ನ ವಿರುದ್ಧ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ. 

ಈ ಸರ್ಕಾರ ಇನ್ನು ನಾಲ್ಕು ತಿಂಗಳು ಮಾತ್ರ ಉಳಿಯುತ್ತದೆ. ಆಧವ್ ಅರ್ಜುನ ಎಂಬ ಒಬ್ಬ ವ್ಯಕ್ತಿ ಇದ್ದಾನೆ. ನಿಮಗೆ ಧೈರ್ಯವಿದ್ದರೆ, ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ನಾನು ಕೂಡ ರಾಜೀನಾಮೆ ನೀಡುತ್ತೇನೆ. ತಿರುಚೆಂಡೂರಿನಲ್ಲಿ ಸ್ಪರ್ಧಿಸೋಣ. ಇದು ನಮ್ಮ ಊರು. ನಾವು ಯಾರೇ ನಿಂತರೂ ಸೋಲಿಸುತ್ತೇವೆ ಎಂದಿದ್ದಾರೆ.

ತಿರುಚೆಂಡೂರ್ ಕ್ಷೇತ್ರವು 25 ವರ್ಷಗಳಿಂದ ರಾಧಾಕೃಷ್ಣನ್ ಅವರ ಭದ್ರಕೋಟೆಯಾಗಿದೆ. ಅವರು 2001 ರಲ್ಲಿ ಡಿಎಂಕೆಯ ಮಹಾನ್ ದ್ರಾವಿಡ ಪ್ರತಿಸ್ಪರ್ಧಿ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪರವಾಗಿ ಗೆದ್ದರು. 2009 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಗೆಲುವು ಸಾಧಿಸಿದ್ದರು. 

ತಮ್ಮ ಭದ್ರಕೋಟೆಯಾದ ಕೊಲತ್ತೂರ್ ಅನ್ನು ವಿ.ಎಸ್.ಬಾಬು ವಿರುದ್ಧ ಕಳೆದುಕೊಂಡ ನಂತರವೂ ಸ್ಟಾಲಿನ್ ಅವರನ್ನು ರಾಧಾಕೃಷ್ಣನ್ ಸಮರ್ಥಿಸಿಕೊಂಡಿದ್ದಾರೆ. ಡಿಎಂಕೆಯ ಮಾಜಿ ನಾಯಕ ವಿ.ಎಸ್. ಬಾಬು ಅವರು ವಿಜಯ್ ಅವರ ಟಿವಿಕೆಗೆ ಸೇರಿ ಸ್ಟಾಲಿನ್‌ ಅವರನ್ನು ಮಣಿಸಿದ್ದಾರೆ. ನಮ್ಮ ‘ತಲೈವರ್’ (ನಾಯಕ) ಎಂ.ಕೆ.ಸ್ಟಾಲಿನ್ ತಿರುಚ್ಚಿಯಲ್ಲಿ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ. ಸ್ಟಾಲಿನ್ ಕೊಲತ್ತೂರ್ ಅನ್ನು ಸಿಂಗಾಪುರವಾಗಿ ಪರಿವರ್ತಿಸಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ – ಇನ್ಮುಂದೆ ಓಲಾ, ಉಬರ್ ಪ್ರಯಾಣವೂ ದುಬಾರಿ?

Btv Kannada
Author: Btv Kannada

Leave a Comment

Read More