ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ – ಇನ್ಮುಂದೆ ಓಲಾ, ಉಬರ್ ಪ್ರಯಾಣವೂ ದುಬಾರಿ?

ಬೆಂಗಳೂರು : ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಒಂದಾದ ಮೇಲೊಂದರಂತೆ ತಟ್ಟುತ್ತಲೇ ಇದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರಗಳು ಗಣನೀಯವಾಗಿ ಹೆಚ್ಚಾದ ಬೆನ್ನಲ್ಲೇ, ಖಾಸಗಿ ಬಸ್ ಮತ್ತು ಶಾಲಾ ವ್ಯಾನ್‌ಗಳ ದರ ಈಗಾಗಲೇ ಏರಿಕೆಯಾಗಿದೆ. ಇನ್ಮುಂದೆ ಓಲಾ, ಉಬರ್ ಪ್ರಯಾಣದ ದರವೂ ದುಬಾರಿಯಾಗುವ ಸಾಧ್ಯತೆಯಿದೆ.

ಇಂಧನ ಮತ್ತು ಸಿಎನ್‌ಜಿ (CNG) ದರ ಏರಿಕೆಯಿಂದ ಕ್ಯಾಬ್ ಮಾಲೀಕರು ಕಂಗಾಲಾಗಿದ್ದು, ಇದೀಗ ಓಲಾ-ಉಬರ್ ಕ್ಯಾಬ್ ದರ ಹೆಚ್ಚಳಕ್ಕೆ ಚಾಲಕರ ಸಂಘಟನೆಗಳು ಪಟ್ಟು ಹಿಡಿದಿದೆ. ಸಾರಿಗೆ ಇಲಾಖೆ ಹಾಗೂ ಅಗ್ರಿಗೇಟರ್ ಕಂಪನಿಗಳ ಮೇಲೆ ತೀವ್ರ ಒತ್ತಡ ಹೇರಲು ಮುಂದಾಗಿವೆ.

ಇನ್ನು, ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯಿಂದ ಕಂಗಾಲಾಗಿರುವ ಚಾಲಕರು “ಲೋನ್ ಕಂತು ಕಟ್ಟುವುದು ಹೇಗೆ?” ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ, ಸದ್ಯದ ದರಕ್ಕೆ ಪ್ರತಿ ಕಿಲೋಮೀಟರ್‌ಗೆ ಕನಿಷ್ಠ 5 ರಿಂದ 10 ರೂಪಾಯಿಗಳಷ್ಟು ಹೆಚ್ಚಳ ಮಾಡಬೇಕು ಎಂದು ಚಾಲಕರ ಸಂಘಟನೆಗಳು ಬೇಡಿಕೆ ಇಟ್ಟಿವೆ.

ಚಾಲಕರ ಬೇಡಿಕೆಗೆ ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿಗರ ಜೇಬು ಖಾಲಿಯಾಗೋದು ಗ್ಯಾರಂಟಿ.

RTO ದರ ಮತ್ತು ಕಂಪನಿಗಳ ಕಮಿಷನ್ ಜಟಾಪಟಿ :

ಇನ್ನು ಆರ್‌ಟಿಒ (RTO) ನಿಯಮಾವಳಿಗಳ ಪ್ರಕಾರ ಕನಿಷ್ಠ ದರ ಪ್ರತಿ ಕಿಲೋಮೀಟರ್‌ಗೆ 24 ರೂಪಾಯಿ ನಿಗದಿಯಾಗಿದ್ದರೂ, ಓಲಾ ಮತ್ತು ಉಬರ್‌ನಂತಹ ಅಗ್ರಿಗೇಟರ್ ಕಂಪನಿಗಳ ಭಾರಿ ಕಮಿಷನ್ ಕಡಿತದಿಂದಾಗಿ ಚಾಲಕರ ಕೈ ಸೇರುತ್ತಿರುವುದು ಕೇವಲ 10 ರೂಪಾಯಿ ಮಾತ್ರ. ಅತಿ ಹೆಚ್ಚು ಬೇಡಿಕೆ ಇರುವ ಪೀಕ್ ಅವರ್ಸ್ ಸಮಯದಲ್ಲೂ ಕಂಪನಿಗಳು ತಮಗೆ ವಂಚಿಸುತ್ತಿವೆ ಎಂದು ಚಾಲಕರು ಗಂಭೀರ ಆಪಾದನೆ ಮಾಡಿದ್ದಾರೆ.

ಇದನ್ನೂ ಓದಿ : ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಪ್ರಮಾಣವಚನ ಸ್ವೀಕಾರ!

Btv Kannada
Author: Btv Kannada

Leave a Comment

Read More