ಚೋಳ ರಾಜವಂಶದ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾದ 11ನೇ ಶತಮಾನದ ಅನೈಮಂಗಲಂ ತಾಮ್ರ ಶಾಸನಗಳನ್ನು ನೆದರ್ಲ್ಯಾಂಡ್ಸ್ ಭಾರತಕ್ಕೆ ಹಿಂದಿರುಗಿಸಿದೆ.
18ನೇ ಶತಮಾನದಲ್ಲಿ ನಾಗಪಟ್ಟಣಂ ಡಚ್ ನಿಯಂತ್ರಣದಲ್ಲಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಕ್ರಿಶ್ಚಿಯನ್ ಮಿಷನ್‌ನೊಂದಿಗೆ ಸಂಬಂಧ ಹೊಂದಿದ್ದ ಫ್ಲೋರೆಂಟಿಯಸ್ ಕ್ಯಾಂಪರ್ ಈ ಫಲಕಗಳನ್ನು ನೆದರ್‌ಲ್ಯಾಂಡ್ಸ್ಗೆ ಕೊಂಡೊಯ್ದಿದ್ದರು. ಈ ಫಲಕಗಳನ್ನು ವಾಪಸ್ ತರಿಸಿಕೊಳ್ಳಲು ಭಾರತ 2012 ರಿಂದ ನಿರಂತರವಾಗಿ ಪ್ರಯತ್ನ ನಡೆಸಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಭಾರತ ಹಾಗೂ ನೆದರ್ಲೆಂಡ್ಸ್ ನಡುವೆ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲು ನೆದರ್ಲೆಂಡ್ಸ್ಗೆ ಭೇಟಿ ನೀಡಿದ್ದರು. ಈ ಹೊತ್ತಿನಲ್ಲೇ ಭಾರತದ ಐತಿಹಾಸಿಕ ಫಲಕಗಳನ್ನು ಹಿಂತಿರುಗಿಸಿದೆ.
ಈ ತಾಮ್ರದ ಶಾಸನದ ಮಹತ್ವವೇನು?:
ಈ ಶಾಸನಗಳನ್ನು ಭಾರತೀಯ ಇತಿಹಾಸ ಮತ್ತು ತಮಿಳು ಶಿಲಾಶಾಸನದ ಹಲವಾರು ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿಯವರ ಐತಿಹಾಸಿಕ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ನಲ್ಲಿ ಕೂಡ ಈ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನಗಳು ಹಿಂದೂ ದೇವರಾದ ವಿಷ್ಣುವಿನ ಸ್ತುತಿಗಳೊಂದಿಗೆ ಪ್ರಾರಂಭವಾಗಿ, ದೇವರ ಪೂರ್ವಜರ ಸಂಪೂರ್ಣ ಪಟ್ಟಿಯ ಮೂಲಕ ಮುಂದುವರಿಯುವ ಮೂಲಕ ತಂಜಾವೂರಿನ ಚೋಳ ರಾಜವಂಶದ ವಂಶಾವಳಿಯನ್ನು ಒಳಗೊಂಡಿದೆ.
ಈ ಶಾಸನವನ್ನು ಕಂಚಿನ ಕಡಗದಲ್ಲಿ ಸೇರಿಸಿಡಲಾಗಿದೆ. ಇದು ರಾಜೇಂದ್ರ ಚೋಳ I ಅವರ ಮುದ್ರೆಯನ್ನು ಕೂಡ ಹೊಂದಿದೆ. ತಾಳೆಗರಿಯಲ್ಲಿ ಇತಿಹಾಸವನ್ನು ಕೆತ್ತನೆ ಮಾಡುತ್ತಿದ್ದಂತೆಯೇ ಆಗಿನ ಕಾಲದಲ್ಲಿ ತಾಮ್ರದ ಹಾಳೆಗಳಲ್ಲಿ ಕೆತ್ತನೆ ಮಾಡಲಾಗುತ್ತಿತ್ತು. ಇದು ಭಾರತದ ಪಾಲಿಗೆ ದೊಡ್ಡ ಐತಿಹಾಸಿಕ ದಾಖಲೆಯಾಗಿದೆ.
ಇದನ್ನೂ ಓದಿ : ಮುಷ್ಕರಕ್ಕೂ ಮುನ್ನವೇ BMTC ನೌಕರರಿಗೆ ಗುಡ್‌ನ್ಯೂಸ್ – 11 ತಿಂಗಳ ಬಾಕಿ ವೇತನ ಬಿಡುಗಡೆ!








