ಆಟೋ, ಟ್ಯಾಕ್ಸಿ​ ಚಾಲಕರಿಗೆ ಮತ್ತೆ ಶಾಕ್​​ – CNG ದರ ಕೆಜಿಗೆ 1 ರೂ. ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ!

ನವದೆಹಲಿ : ದೇಶದಲ್ಲಿ ಜನಸಾಮಾನ್ಯರ ಜೇಬಿಗೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಇದೀಗ ಕೇಂದ್ರ ಸರ್ಕಾರ ಮತ್ತೆ CNG ದರವನ್ನು ಕೆಜಿಗೆ 1 ರೂಪಾಯಿ ಹೆಚ್ಚಳ ಮಾಡಿದೆ. 

2 ದಿನಗಳ ಹಿಂದಷ್ಟೇ ಕೆಜಿ CNG ದರ 2 ರೂಪಾಯಿಗೆ ಏರಿಕೆ ಕಂಡಿತ್ತು. ಆ ಬೆನ್ನಲ್ಲೇ 48 ಗಂಟೆಗಳಲ್ಲಿ 2ನೇ ಬಾರಿಗೆ CNG ದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಆ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿ ಸಿಎನ್​​ಜಿ ದರ 80.09 ರೂಪಾಯಿಗಳಿಗೆ ತಲುಪಿದೆ. ಈ ಹಿಂದೆ 2 ರೂ. ಏರಿಕೆಯ ಬಳಿಕ CNG ದರ 77.09 ರೂ.ಗಳಿಂದ 79.09ಕ್ಕೆ ಏರಿಕೆಯಾಗಿತ್ತು.

ಸಿಎನ್​​ಜಿ ದರ ನಗರಗಳಲ್ಲಿ ಕೆಜಿಗೆ ಈಗ ಎಷ್ಟು?
  • ಬೆಂಗಳೂರು- 90 ರೂ.
  • ದೆಹಲಿ- 80.09 ರೂ.
  • ನೋಯ್ಡಾ- 80.09 ರೂ.
  • ಗುರುಗ್ರಾಮ- 84.12 ರೂ.
  • ಮುಂಬೈ- 84 ರೂ.

ಸತತವಾಗಿ ಸಿಎನ್​​ಜಿ ದರ ಏರಿಕೆಯ ಪರಿಣಾಮ ಇದನ್ನೇ ನಂಬಿಕೊಂಡಿರುವ ಆಟೋ ಮತ್ತು ಬಹುತೇಕ ಕ್ಯಾಬ್​​ಗಳ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಇದನ್ನೂ ಓದಿ : ಜೈಲಿನಲ್ಲಿ ನಟ ದರ್ಶನ್ ಲೈಫ್ ಸ್ಟೈಲ್ ಹೇಗಿದೆ? – ಕಾರಗೃಹದಿಂದ ಸುಪ್ರೀಂ ಕೋರ್ಟ್‌ಗೆ ಕಂಪ್ಲೀಟ್ ವರದಿ!

Btv Kannada
Author: Btv Kannada

Leave a Comment

Read More

Read More